ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪಶುಸಂಗೋಪನೆಗೆ ಶೇ.6ರ ಬಡ್ಡಿ ದರದಲ್ಲಿ ಸಾಲ: ಬೆಳಮಗಿ (Vetarnary agriculture loan)
Bookmark and Share Feedback Print
 
2010-11ನೇ ಸಾಲಿನಲ್ಲಿ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರ ಬಡತನ ನಿರ್ಮೂಲನೆ ಹಿನ್ನೆಲೆಯಲ್ಲಿ ಪಶುಸಂಗೋಪನಾ ಚಟುವಟಿಕೆ ಕೈಗೊಳ್ಳಲು ಶೇ.6ರ ಬಡ್ಡಿ ದರದಲ್ಲಿ ಸಾಲ ಯೋಜನೆಗೆ ಆದೇಶ ಹೊರಡಿಸಲಾಗಿದ್ದು, ಈ ಯೋಜನೆಗೆ 23.20 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ರೇವೂನಾಯಕ ಬೆಳಮಗಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೆಳಮಗಿ, 1.2 ಲಕ್ಷ ಹಸು ಘಟಕ, 26 ಸಾವಿರ ಕುರಿ ಘಟಕ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಬಡ ಕುಟುಂಬಗಳು ಅದರಲ್ಲೂ ವಿಶೇಷವಾಗಿ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರ ಆರ್ಥಿಕ ಸಬಲತೆಗೆ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

2010-11ನೇ ಸಾಲಿನಲ್ಲಿ, ಕುರಿ ಸಾಕುವಿಕೆಗೆ 7050 ಫಲಾನುಭವಿಗಳಿಗೆ 7.05 ಕೋಟಿ ರೂ., ಕುರಿ ಸಾಕುವಿಕೆ ತರಬೇತಿಗೆ 15 ಲಕ್ಷ ರೂ. ಒದಗಿಸಲಾಗಿದೆ. ಘಟಕ ವೆಚ್ಚ 23600 ರೂ. ಇದ್ದು, ಈ ಪೈಕಿ ಸಹಾಯಧನ 10 ಸಾವಿರ ರೂ. ಹಾಗೂ ಬ್ಯಾಂಕ್ ಸಾಲ 13600 ರೂ. ಇರಲಿದೆ.

ವಿಶೇಷ ಘಟಕ ಯೋಜನೆಗೆ 57 ಲಕ್ಷ ರೂ., ಗಿರಿಜನ ಉಪ ಯೋಜನೆಗೆ 23 ಲಕ್ಷ ರೂ. ಹಾಗೂ ವಿಮಾ ಪರಿಹಾರಕ್ಕೆ 50 ಲಕ್ಷ ರೂ. ಒದಗಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೊಸದಾಗಿ ಪಶು ವೈದ್ಯ ಕಾಲೇಜು ಸ್ಥಾಪನೆಗೆ 5 ಕೋಟಿ ರೂ. ನಿಗದಿಪಡಿಸಲಾಗಿದೆ.

ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗಗಳಲ್ಲಿ ನೂತನ ಶಿಥಲೀಕರಣ ಘಟಕ ಸ್ಥಾಪನೆಗೆ 10 ಕೋಟಿ ರೂ. ನಿಗದಿ ಮಾಡಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವ 487 ಪಶುವೈದ್ಯ ಹುದ್ದೆ ಭರ್ತಿಗೆ ಪ್ರಕ್ರಿಯೆ ಪ್ರಾರಂಭವಾಗಿದೆ. 2010-11ನೇ ಸಾಲಿನಲ್ಲಿ ಇಲಾಖೆ ಅಭಿವೃದ್ದಿ ಕಾರ್ಯಕ್ರಮಗಳಿಗೆ 459.48 ಕೋಟಿ ರೂ. ಒದಗಿಸಲಾಗಿದೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ