ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತರಂಗಾಂತರ: ಸರಕಾರಕ್ಕೆ1ಲಕ್ಷ ಕೋಟಿ ರೂ. ಆದಾಯ (Delhi|3G|spectrum|Bharti Airtel|Idea Cellular|Reliance communications)
Bookmark and Share Feedback Print
 
ಟೆಲಿಕಾಂ ತರಂಗಾಂತರಗಳ ಹರಾಜಿನಿಂದ ಕೇಂದ್ರ ಸರಕಾರಕ್ಕೆ 1 ಲಕ್ಷ ಕೋಟಿ ರೂಪಾಯಿ ನಿವ್ವಳ ಲಾಭವಾಗಿದೆ. ಬಜೆಟ್‌ನಲ್ಲಿ ತರಂಗಾಂತರಗಳ ಹರಾಜಿನಿಂದ 35 ಸಾವಿರ ಕೋಟಿ ರೂ. ಲಾಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು.ಆದರೆ ನಿವ್ವಳ ಲಾಭದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ

3ಜಿ ತರಂಗಾಂತರಗಳ ಹರಾಜಿನಿಂದ ಕೇಂದ್ರ ಸರಕಾರ ಈಗಾಗಲೇ 67,719 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ. 22 ವಲಯಗಳಲ್ಲಿ 2ಜಿ ತರಂಗಾಂತರಗಳ ಹರಾಜು ಸೋಮವಾರದಂದು 10,652 ಕೋಟಿ ರೂಪಾಯಿಗಳವರೆಗೆ ತಲುಪಿದೆ.

ಮೂರು ಲೈಸೆನ್ಸ್‌ಗಳನ್ನು ಪ್ರತಿ ವಲಯಕ್ಕೆ ನೀಡಿದಲ್ಲಿ 31,956 ಕೋಟಿ ರೂಪಾಯಿಗಳಿಗೆ ತಲುಪಲಿದೆ. ಇದರಿಂದಾಗಿ 3ಜಿ ಮತ್ತು 2ಜಿ ತರಂಗಾಂತರಗಳ ಹರಾಜಿನಿಂದ ಒಟ್ಟು 99,675 ಕೋಟಿ ರೂಪಾಯಿಗಳಿಗೆ ತಲುಪಿದಂತಾಗಿದೆ.ಬಿಡಬ್ಲೂಎ ತರಂಗಾಂತರಗಳ ಹರಾಜು ಮುಂದುವರಿದಿದೆ.

2ಜಿ ತರಂಗಾಂತರಗಳ ಹರಾಜಿನಲ್ಲಿ ಮುಂಬೈ 1,804.3 ಕೋಟಿ ರೂ, ದೆಹಲಿ 1,758.3 ಕೋಟಿ ರೂ.ತಮಿಳುನಾಡು 1,614.5 ಕೋಟಿ ರೂ. ಮತ್ತು ಕರ್ನಾಟಕ 1,277 ಕೋಟಿ ರೂಪಾಯಿಗಳ ಬಿಡ್ ಪಡೆದಿದ್ದು,ಬುಧವಾರದ ವೇಳೆಗೆ ತರಂಗಾಂತರಗಳ ಹರಾಜಿನ ಒಟ್ಟು ಮೊತ್ತ 1ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿನ ಆದಾಯವಾಗಲಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ಬಿಡಬ್ಲೂಎ ತರಂಗಾಂತರಗಳ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್,ಐಡಿಯಾ ಸೆಲ್ಯೂಲರ್, ಏರ್ಸೆಲ್, ವೋಡಾಫೋನ್, ಟಾಟಾ ಕಮ್ಯೂನಿಕೇಶನ್ಸ್, ಆಗುರೆ ಟಿಕೋನಾ ವೈರ್‌ಲೆಸ್, ಇನ್ಫೋಟೆಲ್ ಬ್ರಾಡ್‌ಬ್ಯಾಂಡ್ ಸರ್ವಿಸ್ ಮತ್ತು ಕುವಲ್‌ಕಾಮ್‌ ಟೆಲಿಕಾಂ ಕಂಪೆನಿಗಳು ಬಿಡ್‌ನಲ್ಲಿ ಪಾಲ್ಗೊಂಡಿವೆ ಎಂದು ಟೆಲಿಕಾಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ