ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಕೇಶ್ ವಿರುದ್ಧದ ಮಾನನಷ್ಟ ಮೂಕದ್ದಮೆ ಹಿಂದಕ್ಕೆ: ಅನಿಲ್ (Anil Ambani | Mukesh Ambani | High Court | Defamation suit)
Bookmark and Share Feedback Print
 
PTI
ದೇಶದ ಖ್ಯಾತ ಉದ್ಯಮಿ ಅನಿಲ್ ಅಂಬಾನಿ, ಹಿರಿಯ ಸಹೋದರ ಮುಕೇಶ್ ವಿರುದ್ಧ ಮುಂಬೈ ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ 10 ಸಾವಿರ ಕೋಟಿ ರೂಪಾಯಿ ಮಾನನಷ್ಟ ಮೂಕದ್ದಮೆಯನ್ನು ಹಿಂದಕ್ಕೆ ಪಡೆದು, ಬಾಂಧವ್ಯ ಸುಧಾರಣೆಯ ಸಂಕೇತವನ್ನು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೌದು, ಅನಿಲ್ ಅಂಬಾನಿ ಸಹೋದರ ಮುಕೇಶ್ ವಿರುದ್ಧ ಹೂಡಲಾಗಿದ್ದ 10,000 ಕೋಟಿ ರೂಪಾಯಿ ಮಾನನಷ್ಟ ಮೂಕದ್ದಮೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ.

2008ರಲ್ಲಿ ಮುಕೇಶ್ ಅಂಬಾನಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೂಕದ್ದಮೆಯನ್ನು ದಾಖಲಿಸಿದ್ದರು. ಸಂದರ್ಶನವನ್ನು ಪ್ರಕಟಿಸಿದ ಎರಡು ಪತ್ರಿಕೆಗಳನ್ನು ಪ್ರತಿವಾದಿಗಳಾಗಿಸಿತ್ತು.

ಅಪೆಕ್ಸ್ ನ್ಯಾಯಾಲಯ ಮೇ 7 ರಂದು ನೀಡಿದ ತೀರ್ಪಿನನ್ವಯ, ಉಭಯ ಕಂಪೆನಿಗಳ ನಡುವಣ ವಿವಾದಕ್ಕೆ ಕಾರಣವಾಗಿದ್ದ ಅನಿಲ ಸರಬರಾಜು ಹಾಗೂ ಸ್ಪರ್ಧಾರಹಿತ ಒಪ್ಪಂದ ರದ್ದುಗೊಳಿಸಿದ ವಾರದ ನಂತರ ಮಾನನಷ್ಟ ಮೂಕದ್ದಮೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.

ಅಂಬಾನಿ ಸಹೋದರರು 2005ರಲ್ಲಿ ಪರಸ್ಪರ ಬೇರೆಯಾಗಿ, ಸುಮಾರು ನಾಲ್ಕು ವರ್ಷಗಳ ಕಾಲ ಪರಸ್ಪರ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವಲ್ಲಿ ನಿರತರಾಗಿದ್ದರು.ಆದರೆ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರರು ಯಾವುದೇ ಹೇಳಿಕೆಯನ್ನು ನೀಡಲು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ