ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲಾಂಡ್ ರೋವರ್ ಮಾರಾಟದಲ್ಲಿ ಶೇ.42ರಷ್ಟು ಹೆಚ್ಚಳ (Land Rover| Sales | Tata group | America)
Bookmark and Share Feedback Print
 
ಟಾಟಾ ಗ್ರೂಪ್ ಮಾಲೀಕತ್ವದ ಲಾಂಡ್ ರೋವರ್, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮೇ ತಿಂಗಳ ವಾಹನಗಳ ಮಾರಾಟದಲ್ಲಿ ಶೇ.42.3ರಷ್ಟು ಏರಿಕೆಯಾಗಿ 15,181 ವಾಹನಗಳನ್ನು ಮಾರಾಟ ಮಾಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜಾಗತಿಕ ಮಾರುಕಟ್ಟೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.ಪ್ರಸಕ್ತ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ವಾಹನಗಳ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿನ್ಯಾಸಗಳಿಂದಾಗಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಲಾಂಡ್ ರೋವರ್ ಮಾಡೆಲ್ ಕಾರುಗಳ ಮಾರಾಟದಲ್ಲಿ ಶೇ.64ರಷ್ಟು ಹೆಚ್ಚಳವಾಗಿ 3,040 ವಾಹನಗಳನ್ನು ಮಾರಾಟ ಮಾಡಲಾಗಿದೆ. ಉತ್ತರ ಅಮೆರಿಕದಲ್ಲಿ ಲಾಂಡ್ ರೋವರ್ ವಾಹನಗಳ ಮಾರಾಟದಲ್ಲಿ ಶೇ.24ರಷ್ಟು ಹೆಚ್ಚಳವಾಗಿ 2,935 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಲಾಂಡ್‌ ರೋವರ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾ ಮತ್ತು ಇಟಲಿಯಲ್ಲಿ ಕ್ರಮವಾಗಿ ವಾಹನಗಳ ಮಾರಾಟದಲ್ಲಿ ಶೇ.104 ಮತ್ತು ಶೇ.25.9ರಷ್ಟು ಹೆಚ್ಚಳವಾಗಿ 2,026 ಮತ್ತು 1,133 ವಾಹನಗಳನ್ನು ಮಾರಾಟ ಮಾಡಲಾಗಿದೆ.ಲಾಂಡ್ ರೋವರ್ ಕಂಪೆನಿ ಮೇ ತಿಂಗಳ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಒಟ್ಟು ಮಾರಾಟ ಶೇ.60 ರಷ್ಟು ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ