ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೆಬ್ ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ:ಚೀನಾ (China | Google | Full freedom | Netizens)
Bookmark and Share Feedback Print
 
ಜಾಗತಿಕ ಅಂತರ್ಜಾಲ ದೈತ್ಯ ಸಂಸ್ಥೆಯಾದ ಗೂಗಲ್ ವಿವಾದದಿಂದ ಹೊರಬಂದ ಚೀನಾ, ದೇಶದಲ್ಲಿ 384 ಮಿಲಿಯನ್ ಬಳಕೆದಾರರಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ವೆಬ್ ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದೆ.

1997ರಲ್ಲಿ ದೇಶದಲ್ಲಿನ ವೆಬ್ ಬಳಕೆದಾರರ ಸಂಖ್ಯೆಗೆ ಹೋಲಿಸಿದಲ್ಲಿ, 2009ರ ವರ್ಷಾಂತ್ಯಕ್ಕೆ 618 ಪಟ್ಟು ಹೆಚ್ಚಳವಾಗಿ 384 ಮಿನಿಯನ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ವೆಬ್ ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಚೀನಾ ಸರಕಾರದ ಅಧಿಕೃತ ಪತ್ರಿಕೆಯಾದ ವೈಟ್ ಪೇಪರ್‌ ವರದಿಯಲ್ಲಿ ಪ್ರಕಟಸಿದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.28.9ರಷ್ಟು ಜನತೆ ಇಂಟರ್‌ನೆಟ್ ಬಳಸುತ್ತಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚು ಇಂಟರ್‌ನೆಟ್ ಬಳಸುವ ರಾಷ್ಟ್ರವಾಗಿ, ಚೀನಾ ಹೊರಹೊಮ್ಮಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಅವಧಿಯಲ್ಲಿ ದೇಶದಲ್ಲಿ 3.23 ಮಿಲಿಯನ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬಳಕೆದಾರರ ಸಂಖ್ಯೆಯಲ್ಲಿ ಶೇ.45ರಷ್ಟು ಏರಿಕೆ ಕಂಡಿದೆ.346 ಮಿಲಿಯನ್ ಬಳಕೆದಾರರು ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಬಳಸುತ್ತಿದ್ದು, 233 ಮಿಲಿಯನ್ ಬಳಕೆದಾರರು ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಲು ಮೊಬೈಲ್ ಬಳಸುತ್ತಾರೆ.

1997ರ ಅವಧಿಯಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಗೆ ಹೋಲಿಸಿದಲ್ಲಿ, 2,152 ಪಟ್ಟು ಹೆಚ್ಚಳವಾಗಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ