ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಫೆಟ್‌‌ರೊಂದಿಗೆ ಭೋಜನ: 2ಲಕ್ಷ ಡಾ,ತಲುಪಿದ ಹರಾಜು ಮೊತ್ತ (Warren Buffett | Smith & Wollensky steakhouse | Glide Foundation | Online auction)
Bookmark and Share Feedback Print
 
ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಬಿಲಿಯನೇರ್ ಹೂಡಿಕೆದಾರ ವಾರೆನ್ ಬಫೆಟ್‌ ಅವರೊಂದಿಗೆ ಭೋಜನ ಸವಿಯಲು ನಡೆಸುತ್ತಿರುವ ವಾರ್ಷಿಕ ಆನ್‌ಲೈನ್ ಹರಾಜು ಮೊತ್ತ 200,100 ಡಾಲರ್‌ಗಳಿಗೆ ತಲುಪಿದೆ.

ಆನ್‌ಲೈನ್‌ ಬಿಡ್‌ನಲ್ಲಿ ವಿಜೇತರಾದ ವ್ಯಕ್ತಿ ಹಾಗೂ ಇತರ ಏಳು ಮಂದಿಗೆ ಬಫೆಟ್ ಅವರೊಂದಿಗೆ ಭೋಜನ ಸವಿಯುವ ಅವಕಾಶವಿದೆ ಎಂದು ಸ್ಮಿತ್ ಆಂಡ್ ವೊಲೆನ್‌ಸ್ಕೈ ಸ್ಟೀಕ್‌ಹೌಸ್ ತಿಳಿಸಿದೆ.

ಉಪಹಾರ, ಹೆಲ್ತ್ ಕೇರ್, ಚೈಲ್ಡ್ ಕೇರ್ ,ನಿರಾಶ್ರಿತರಿಗೆ ವಸತಿ ಸೌಲಭ್ಯ ಮತ್ತು ಬಡವರಿಗೆ ಉದ್ಯೋಗ ತರಬೇತಿಯನ್ನು ನೀಡುತ್ತಿರುವ
ಸಾನ್‌ಫ್ರಾನ್ಸಿಸ್ಕೊದಲ್ಲಿರುವ ಲಾಭದಾಯಕವಲ್ಲದ ಗ್ಲೈಡ್ ಫೌಂಡೇಶನ್‌ಗೆ ಹರಾಜು ಮೊತ್ತವನ್ನು ನೀಡಲಾಗುವುದು ಎಂದು ಆಯೋಜಕ ಮೂಲಗಳು ತಿಳಿಸಿವೆ.

2004ರಲ್ಲಿ ಸಾವನ್ನಪ್ಪಿದ ಬಫೆಟ್ ಪತ್ನಿ ಸೂಸಾನ್, ಬಫೆಟ್ ಅವರಿಗೆ ಗ್ಲೈಡ್ ಫೌಂಡೇಶನ್ ಮುಖ್ಯಸ್ಥ ರೆವರೆಂಡ್ ಸೆಸಿಲ್ ವಿಲಿಯಮ್ಸ್ ಅವರನ್ನು ಭೇಟಿ ಮಾಡಿಸಿದ ನಂತರ ಫೌಂಡೇಶನ್‌ಗೆ ದಾನ ನೀಡುವುದನ್ನು ಮುಂದುವರಿಸಿದ್ದಾರೆ.

ಪ್ರಸಕ್ತ ವರ್ಷದ ಹರಾಜು, ಇಬೇ ಇಂಕ್ ವೆಬ್‌ಸೈಟ್‌‌ನಲ್ಲಿ ಆನ್‌ಲೈನ್ ಹರಾಜು ನಡೆಯುತ್ತಿದ್ದು, ಶುಕ್ರವಾರದಂದು ರಾತ್ರಿ 10.30ಕ್ಕೆ ಅಂತ್ಯಗೊಳ್ಳಲಿದೆ.

ಕಳೆದ ವರ್ಷ ಟೊರೊಂಟೊ ಮೂಲದ ಸಾಲಿಡಾ ಕ್ಯಾಪಿಟಲ್ ಕಾರ್ಪೋರೇಶನ್ ಕಂಪೆನಿ,1,680,300 ಡಾಲರ್‌ಗಳನ್ನು ಪಾವತಿಸಿ, ಬಫೆಟ್ ಅವರೊಂದಿಗೆ ಭೋಜನ ಸವಿಯುವ ಭಾಗ್ಯವನ್ನು ಪಡೆದಿತ್ತು. 2008ರಲ್ಲಿ ಹಾಂಗ್‌ಕಾಂಗ್ ಮೂಲದ ಹೂಡಿಕೆದಾರರಾದ ಝಾವೊ ಡಾನ್‌ಯಾಂಗ್ 2,110,100 ಡಾಲರ್‌ಗಳ ದಾಖಲೆ ಮೊತ್ತವನ್ನು ಪಾವತಿಸಿ ಬಫೆಟ್ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದರು.

ಫೋರ್ಬ್ಸ್ ಮ್ಯಾಗ್‌ಜಿನ್ ಪ್ರಕಾರ, ವಾರೆನ್ ಬಫೆಟ್ 47 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.2006ರಲ್ಲಿ ತಮ್ಮ ಬಹುತೇಕ ಸಂಪತ್ತನ್ನು, ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಮತ್ತು ನಾಲ್ಕು ಧರ್ಮಾರ್ಥ ಸಂಸ್ಥೆಗಳಿಗೆ ದಾನವಾಗಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ