ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಪೈಸ್ ಜೆಟ್‌ನಿಂದ ಕಾಠ್ಮಂಡು, ಢಾಕಾಗೆ ವಿಮಾನ ಸಂಚಾರ (SpiceJet | Flights | Kathmandu | Dhaka | Maldives | Budget)
Bookmark and Share Feedback Print
 
ಆಯಾ ದೇಶಗಳಲ್ಲಿರುವ ಸರಕಾರಗಳ ಅನುಮತಿ ಪಡೆದು, ಮುಂಬರುವ ಮಾರ್ಚ್ ವೇಳೆಗೆ ಕಾಠ್ಮಂಡು, ಢಾಕಾ ಮತ್ತು ಮಾಲ್ದೀವ್ಸ್ ದೇಶಗಳಿಗೆ ವಿಮಾನ ಸಂಚಾರ ಆರಂಭಿಸಲಾಗುವುದು ಎಂದು ಸ್ಪೈಸ್ ಜೆಟ್ ಲಿಮಿಟೆಡ್ ಹೇಳಿಕೆ ನೀಡಿದೆ.

ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ವಿಮಾನ ಸಂಚಾರ ಆರಂಭಿಸಲು,ಅನುಮತಿ ಪಡೆಯುವಲ್ಲಿ ವಿಫಲರಾಗಿದ್ದೇವೆ ಎಂದು ಸ್ಪೈಸ್‌ಜೆಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಸಂಯುಕ್ತ ಶ್ರೀಧರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಇತರ ಏರ್‌ಲೈನ್ಸ್‌ಗಳಿಗಿಂತ ಶೇ.10-15ರಷ್ಟು ಕಡಿಮೆ ಟಿಕೆಟ್ ದರವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಕಾಠ್ಮಂಡು, ಢಾಕಾ ಮತ್ತು ಮಾಲ್ದೀವ್ಸ್ ದೇಶಗಳಿಗೆ ವಿಮಾನ ಸಂಚಾರ ಆರಂಭಿಸಲು, ಕೇಂದ್ರ ಸರಕಾರದಿಂದ ಎರಡು ವಾರಗಳ ಹಿಂದೆ ಅನುಮತಿ ಪಡೆಯಲಾಗಿದೆ.ವಿಮಾನಗಳ ಬಳಕೆಯನ್ನು ವಿಸ್ತರಿಸಲು ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭಿಸಲಾಗುತ್ತಿದೆ ಎಂದು ಮುಖ್ಯ ವಾಣಿಜ್ಯ ಅಧಿಕಾರಿ ಸಂಯುಕ್ತ ಶ್ರೀಧರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ