ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಝೈನ್ ಖರೀದಿ : ಭಾರ್ತಿ ಶೇರು ದರಗಳಲ್ಲಿ ಶೇ.7ರಷ್ಟು ಏರಿಕೆ (Bharti Airtel | Zain Africa| Share| Acquisition)
Bookmark and Share Feedback Print
 
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ಕುವೈತ್ ಮೂಲದ ಝೈನ್ ಟೆಲಿಕಾಂ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದ್ದರಿಂದ, ಕಂಪೆನಿಯ ಶೇರು ಮೌಲ್ಯದಲ್ಲಿ ಶೇ.7ರಷ್ಟು ಹೆಚ್ಚಳವಾಗಿದೆ.

ಮುಂಬೈ ಶೇರುಪೇಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಶೇರುದರಗಳಲ್ಲಿ ಶೇ.6.65 ರಷ್ಟು ಏರಿಕೆಯಾಗಿ 274.95 ರೂಪಾಯಿಗಳಿಗೆ ತಲುಪಿದೆ.

2010ರ ಮಾರ್ಚ್ 30ರಂದು ಭಾರ್ತಿ ಏರ್‌ಟೆಲ್ ಕಂಪೆನಿ, ಸುಡಾನ್ ಮತ್ತು ಮೊರೊಕ್ಕೊ ರಾಷ್ಟ್ರಗಳನ್ನು ಹೊರತುಪಡಿಸಿ, ಆಫ್ರಿಕಾದ 17 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಝೈನ್ ಟೆಲಿಕಾಂ ಕಂಪೆನಿಯೊಂದಿಗೆ ಒಪ್ಪಂದವನ್ನು ಅಂತ್ಯಗೊಳಿಸಿತ್ತು.

ಭಾರ್ತಿ ಏರ್‌ಟೆಲ್ ಸಂಸ್ಥೆ, ಕಳೆದ ಎರಡು ವರ್ಷಗಳಿಂದ ಆಫ್ರಿಕಾದ ಎಂಟಿಎನ್ ಕಂಪೆನಿಯನ್ನು 23 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಲು ಯೋಜನೆಯನ್ನು ರೂಪಿಸಿತ್ತು. ಆದರೆ,ಎರಡು ಬಾರಿ ತನ್ನ ಪ್ರಯತ್ನದಲ್ಲಿ ವಿಫಲವಾಗಿತ್ತು.

ಟಾಟಾ ಗ್ರೂಪ್‌ನಿಂದ ವಿದೇಶಿ ಮೂಲದ ಕೋರಸ್ ಕಂಪೆನಿಯನ್ನು ಖರೀದಿಸಿದ ನಂತರ, ಅತಿ ಹೆಚ್ಚು ಮೊತ್ತ ಪಾವತಿಸಿ ಕಂಪೆನಿಯನ್ನು ಖರೀದಿಸಿದ ಸಾಲಿನಲ್ಲಿ ಭಾರ್ತಿ ಏರ್‌ಟೆಲ್, ದೇಶದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ