ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಾಷಿಂಗ್ಟನ್ : ಜೂನ್ 22ರಂದು ಇಂಡೋ-ಯುಎಸ್ ಸಿಇಒ ಸಭೆ (Indo-US CEOs Forum | Ratan Tata | David Cote | Manmohan Singh)
Bookmark and Share Feedback Print
 
ಉಭಯ ದೇಶಗಳ ಆರ್ಥಿಕ ಒಪ್ಪಂದ ಹಾಗೂ ಕಳೆದ ವಾರ ನಡೆದ ವಹಿವಾಟಿನ ಮಾತುಕತೆಗಳ ಬಗ್ಗೆ ಚರ್ಚಿಸಲು,ಜೂನ್ 22 ರಂದು ಇಂಡೋ-ಯುಎಸ್ ಸಿಇಒ ಫೋರಂ ಸಭೆ ಎರಡನೇ ಬಾರಿಗೆ ನಡೆಯಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ಅಮೆರಿಕ ದೇಶಗಳ ಸಂಪುಟ ದರ್ಜೆಯ ಸಚಿವರು ಇಂಡೋ-ಯುಎಸ್ ಸಿಇಒ ಫೋರಂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ದೇಶಗಳ ಪ್ರಮುಖ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವೇದಿಕೆಯನ್ನು ರಚಿಸಲಾಗಿದ್ದು,ಜೂನ್ 22 ರಂದು ವಾಷಿಂಗ್ಟನ್‌ನಲ್ಲಿ ಸಭೆ ನಡೆಯಲಿದೆ ಎಂದು ದಕ್ಷಿಣ ಮತ್ತು ಕೇಂದ್ರ ಏಷ್ಯಾ ದೇಶಗಳ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲಾಕೆ ತಿಳಿಸಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕೆಗೆ ಭೇಟಿ ನೀಡಿದ್ದಾಗ ಸಿಇಒ ಫೋರಂನ್ನು ನವೆಂಬರ್ 2009ರಲ್ಲಿ ಪುನರ್‌ರಚಿಸಲಾಯಿತು. ಕಳೆದ ನವೆಂಬರ್ ತಿಂಗಳಲ್ಲಿ ಪ್ರಧಾನಿ ಸಿಂಗ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದಾಗ ಮೊದಲ ಸಭೆ ನಡೆದಿತ್ತು

ಸಿಇಒ ಫೋರಂ ಅಧ್ಯಕ್ಷರಾಗಿ ಫಾರ್ಚ್ಯೂನ್ 500 ಕಂಪೆನಿಯ ಮುಖ್ಯಸ್ಥ ಡೇವಿಡ್ ಕೊಟೆ,ಉಪಾಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ ಅಧಿಕಾರ ಸ್ವೀಕರಿಸಿದ್ದಾರೆ.

ಭಾರತದ 12 ಮಂದಿ ಸಿಇಒಗಳ ತಂಡದ ನೇತೃತ್ವವನ್ನು ರತನ್ ಟಾಟಾ ವಹಿಸಲಿದ್ದು, ಅಮೆರಿಕದ ಸದಸ್ಯರ ತಂಡದ ನೇತೃತ್ವವನ್ನು ಡೇವಿಡ್ ವಹಿಸಲಿದ್ದಾರೆ. ನಿಯೋಗದಲ್ಲಿ ಸಿಟಿ ಗ್ರೂಪ್ ಸಿಇಒ ವಿಕ್ರಂ ಪಂಡಿತ್ ಮತ್ತು ಪೆಪ್ಸಿಕೊ ಕಂಪೆನಿಯ ಇಂದ್ರಾ ನೂಯಿ ಸೇರಿದಂತೆ ಇತರರು ಸದಸ್ಯರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ