ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದ್ವಿಚಕ್ರವಾಹನ ರಫ್ತು ವಹಿವಾಟಿನಲ್ಲಿ ಶೇ.50ರಷ್ಟು ಹೆಚ್ಚಳ (Bajaj Auto | TVS Motor | Auto export | Up | India)
Bookmark and Share Feedback Print
 
ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಅಟೋ ಮತ್ತು ಟಿವಿಎಸ್ ಮೋಟಾರ್, ಸೇರಿದಂತೆ ಇತರ ಕಂಪೆನಿಗಳ ವಾಹನ ರಫ್ತು ವಹಿವಾಟು ಮೇ ತಿಂಗಳ ಅವಧಿಯಲ್ಲಿ 1,79,130 ದಾಖಲೆಯ ಏರಿಕೆ ಕಂಡಿದೆ.

ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್(ಸಿಯಾಮ್) ಪ್ರಕಾರ, ದ್ವಿಚಕ್ರವಾಹನಗಳ ರಫ್ತು ವಹಿವಾಟಿನಲ್ಲಿ ಶೇ.49.59ರಷ್ಟು ಏರಿಕೆಯಾಗಿ 1,79,130 ವಾಹನಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷದ ಮೇ ತಿಂಗಳ ಅವಧಿಯಲ್ಲಿ 1,19,749 ವಾಹನಗಳನ್ನು ರಫ್ತು ಮಾಡಲಾಗಿತ್ತು.

ಕಳೆದ ಮೇ ತಿಂಗಳ ಅವಧಿಯಲ್ಲಿ, ಎಲ್ಲಾ ವಿಭಾಗಗಳ ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಚೇತರಿಕೆ ಕಂಡಿದೆ ಎಂದು ಸಿಯಾಮ್ ಪ್ರಧಾನ ನಿರ್ದೇಶಕ ವಿಷ್ಣು ಮಾಥುರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳ ರಫ್ತು ವಹಿವಾಟಿನಲ್ಲಿ ಶೇ.49.11ರಷ್ಟು ಏರಿಕೆಯಾಗಿದ್ದು,ಪ್ರಯಾಣಿಕ ಕಾರುಗಳ ರಫ್ತು ವಹಿವಾಟಿನಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ ಎಂದು ಸಿಯಾಮ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ