ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ವೆಟ್ಟರ್‌ಗೆ ಮಾಸಿಕವಾಗಿ 2ಬಿಲಿಯನ್ ಸಂದೇಶಗಳ ರವಾನೆ (Twitter | Tweets | Website | Dick Costolo)
Bookmark and Share Feedback Print
 
ಸೋಶಿಯಲ್ ನೆಟ್‌ವರ್ಕ್ ತಾಣವಾದ ಟ್ವಿಟ್ಟರ್ ಮತ್ತೊಂದು ಮೈಲುಗಲ್ಲನ್ನು ತಲುಪಿದೆ. ಪ್ರತಿ ತಿಂಗಳು ಎರಡು ಬಿಲಿಯನ್ ಸಂದೇಶಗಳು ರವಾನೆಯಾಗುತ್ತವೆ ಎಂದು ವೆಬ್‌ಸೈಟ್ ಘೋಷಿಸಿದೆ

ಟ್ವಿಟ್ಟರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿಕ್ ಕೊಸ್ಟೊಲೊ ಮಾತನಾಡಿ,ಪ್ರತಿ ದಿನ 65 ಮಿಲಿಯನ್ ಸಂದೇಶಗಳು ರವಾನೆಯಾಗುತ್ತಿದ್ದು, ಮಾಸಾಂತ್ಯಕ್ಕೆ 1.96 ಬಿಲಿಯನ್ ಸಂದೇಶಗಳು ರವಾನೆಯಾಗುತ್ತಿವೆ ಎಂದು ತಿಳಿಸಿದ್ದಾರೆ.

ಟ್ವಿಟ್ಟರ್ ತಾಣ, ಕಳೆದ ಮಾಸಾಂತ್ಯಕ್ಕೆ 15ಬಿಲಿಯನ್ ಸಂದೇಶಗಳು ರವಾನೆಯಾಗಿವೆ. ಕಳೆದ ಮೂರು ತಿಂಗಳುಗಳ ಹಿಂದೆ 10 ಬಿಲಿಯನ್ ಸಂದೇಶಗಳು ರವಾನೆಯಾಗುತ್ತಿತ್ತು ಎಂದು ಹೇಳಿದ್ದಾರೆ.

ಪ್ರತಿ ದಿನ ಟ್ವಿಟ್ಟರ್‌ಗೆ ನೋಂದಾಯಿಸುವವರ ಸಂಖ್ಯೆ 135,000ಕ್ಕೆ ತಲುಪಿದೆ.ಆದರೆ, ವಹಿವಾಟಿಗಾಗಿ ನೋಂದಾಯಿಸುವವರ ಸಂಖ್ಯೆಯನ್ನು ಹೊರತುಪಡಿಸಿ, ವೈಯಕ್ತಿಕವಾಗಿ ನೋಂದಾಯಿಸುವವರ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಸ್ಪಷ್ಟವಾಗಿಲ್ಲ ಎಂದು ಕೊಸ್ಟೊಲೊ ತಿಳಿಸಿದ್ದಾರೆ.

ಟ್ವಿಟ್ಟರ್‌ನ ಮೂಲಕೇಂದ್ರ ಕಚೇರಿಗಳನ್ನು ಲಾಸ್ ಎಂಜೆಲೆಸ್ ಮತ್ತು ನ್ಯೂಯಾರ್ಕ್‌‌ನಲ್ಲಿ ಆರಂಭಿಸಲಾಗಿದ್ದು, ಇಂಗ್ಲೆಂಡ್ ಮತ್ತು ಜಪಾನ್ ದೇಶಗಳಲ್ಲಿ ಕಚೇರಿಗಳನ್ನು ವಿಸ್ತರಿಸುವ ಯೋಜನೆಗಳಿವೆ ಎಂದು ಡಿಕ್ ಕೊಸ್ಟೊಲೊ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ