ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನವದೆಹಲಿಯಲ್ಲಿ ನೂತನ ರಸ್ತೆ ತೆರಿಗೆಗಳು ಜಾರಿ (Road tax | New Delhi | Government | Luxury cars)
Bookmark and Share Feedback Print
 
ಸಾರಿಗೆ ಇಲಾಖೆಯ ಆದಾಯವನ್ನು ಹೆಚ್ಚಿಸಲು ದೆಹಲಿ ಸರಕಾರ, ಐಷಾರಾಮಿ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ರಸ್ತೆ ತೆರಿಗೆಯಲ್ಲಿ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.

ದೆಹಲಿಯ ಗವರ್ನರ್ ತೆಜೇಂದರ್ ಖನ್ನಾ ಸರಕಾರದ ನಿರ್ಧಾರಕ್ಕೆ ಅಂತಿಮ ಹಸ್ತಾಕ್ಷರ ಹಾಕುವುದರೊಂದಿಗೆ, ನೂತನ ರಸ್ತೆ ತೆರಿಗೆಗಳು ಇಂದಿನಿಂದ ರಾಜಧಾನಿಯಾಧ್ಯಂತ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

25 ಸಾವಿರ ರೂಪಾಯಿಗಳವರೆಗಿನ ಮೌಲ್ಯದ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರು ಪ್ರಸ್ತುತವಿರುವ ಶೇ.2ರಷ್ಟು ರಸ್ತೆ ತೆರಿಗೆಯನ್ನು ಪಾವತಿಸಬೇಕಾಗಿದೆ.25 ಸಾವಿರ ರೂಪಾಯಿಗಳಿಂದ 40 ಸಾವಿರ ರೂಪಾಯಿಗಳೊಳಗಿನ ಮೌಲ್ಯದ ವಾಹನಗಳಿಗೆ ಶೇ.4ರಷ್ಟು ತೆರಿಗೆಯನ್ನು ವಿಧಿಸಲಾಗಿದೆ.

40 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರು ಶೇ.6ರಷ್ಟು ರಸ್ತೆ ತೆರಿಗೆಯನ್ನು ಪಾವತಿಸಬೇಕಾಗಿದೆ.ದೆಹಲಿ ಸರಕಾರ ಮೇ 24 ರಂದು ಐಷಾರಾಮಿ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸಿತ್ತು.

6 ಲಕ್ಷ ರೂಪಾಯಿಗಳ ಮೌಲ್ಯದ ಕಾರನ್ನು ಖರೀದಿಸುವ ಗ್ರಾಹಕರ ರಸ್ತೆ ತೆರಿಗೆಯನ್ನು ದ್ವಿಗುಣಗೊಳಿಸಿ ಶೇ.4ಕ್ಕೆ ಏರಿಕೆ ಮಾಡಲಾಗಿದೆ.6 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳ ಮೌಲ್ಯದ ಕಾರು ಖರೀದಿಸುವವರು ಶೇ.7ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿದೆ.

10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕಾರನ್ನು ಖರೀದಿಸುವ ಗ್ರಾಹಕರು, ಶೇ10ರಷ್ಟು ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ