ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇದೀಗ, ಮೊಬೈಲ್ ಗ್ರಾಹಕರಿಗೆ ಹಾಟ್‌ಮೇಲ್ ಸೌಲಭ್ಯ ಉಚಿತ (Microsoft India | Hotmail | Free | SMS | GPRS)
Bookmark and Share Feedback Print
 
ಹಾಟ್‌ಮೇಲ್ ಬಳಕೆದಾರರು ಜಿಪಿಆರ್‌ಎಸ್ ಸಂಪರ್ಕವಿಲ್ಲದೆ ಉಚಿತವಾಗಿ ಎಸ್‌ಎಂಎಸ್ ಅಲರ್ಟ್‌ಗಳನ್ನು ಪಡೆಯಬಹುದಾಗಿದೆ ಎಂದು ಮೈಕ್ರೋಸಾಫ್ಟ್ ಇಂಡಿಯಾ ಘೋಷಿಸಿದೆ.

ಹಾಟ್‌ಮೇಲ್ ಬಳಕೆದಾರರು www.mobile.live.com ವೆಬ್‌ಸೈಟ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ನಿಮ್ಮ ಮೊಬೈಲ್‌ಗೆ ವೇರಿಫಿಕೇಶನ್ ಕೋಡ್ ಬಂದಿರುವ ಬಗ್ಗೆ ಖಚಿತವಾದ ನಂತರ ಎಸ್‌ಎಂಎಸ್‌ ಅಲರ್ಟ್‌ಗಳನ್ನು ಪಡೆಯಬಹುದಾಗಿದೆ.

ಇಂತಹ ಸರಳ ರೀತಿಯಿಂದಾಗಿ, ನೀವು ಸೈಬರ್ ಕೆಫೆ ಅಥವಾ ಪ್ರತಿ ಬಾರಿ ಮೇಲ್‌ಗಳನ್ನು ವಿಕ್ಷೀಸಲು ನಿಮ್ಮ ಕಂಪ್ಯೂಟರ್‌ಗೆ ಲಾಗಿನ್ ಆಗುವುದು ತಪ್ಪುತ್ತದೆ. ಇಂತಹ ಸೌಲಭ್ಯ ಪಡೆಯುವುದರಿಂದ ಸಾಮಾನ್ಯ ರೀತಿಯ ಎಸ್‌ಎಂಎಸ್‌ಗಳಂತೆ ಕಾರ್ಯನಿರ್ವಹಿಸುತ್ತದೆ.

ಇದೀಗ ಬಳಕೆದಾರರು ಹಾಟ್‌ಮೇಲ್ ಎಸ್‌ಎಂಎಸ್‌ಗಳನ್ನು ಸ್ವೀಕರಿಸುವುದು, ಓದುವುದು ಮತ್ತು ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ದೇಶದ 506 ಮಿಲಿಯನ್ ಮೊಬೈಲ್ ಗ್ರಾಹಕರಲ್ಲಿ, ಕೇವಲ 18 ಮಿಲಿಯನ್ ಗ್ರಾಹಕರು ಮಾತ್ರ ಮೊಬೈಲ್‌ನಲ್ಲಿ ಜಿಪಿಆರ್‌ಎಸ್ ಸೌಲಭ್ಯವನ್ನು ಹೊಂದಿದ್ದಾರೆ. ಒಟ್ಟು ಮೊಬೈಲ್ ಗ್ರಾಹಕರಲ್ಲಿ ಕೇವಲ ಶೇ.4ರಷ್ಟು ಬಳಕೆದಾರರು ಮಾತ್ರ ಇ-ಮೇಲ್ ಸೌಲಭ್ಯವನ್ನು ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ