ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.74ಕ್ಕೆ ಏರಿಕೆ ಕಂಡ ಅಹಾರ ಹಣದುಬ್ಬರ ದರ (Food Inflation | Pulses | Fruits | Milk | Rose)
Bookmark and Share Feedback Print
 
PR
ದ್ವಿದಳ ಧಾನ್ಯ, ಹಾಲು ಮತ್ತು ತರಕಾರಿ ದರಗಳಲ್ಲಿ ಹೆಚ್ಚಳವಾಗಿದ್ದರಿಂದ, ಮೇ 29ಕ್ಕೆ ವಾರಂತ್ಯಗೊಂಡಂತೆ ಅಹರಾ ಹಣದುಬ್ಬರ ದರ ಶೇ.16.74 ಕ್ಕೆ ಏರಿಕೆ ಕಂಡಿದೆ.

ಕಳೆದ ವಾರ ಶೇ.16.55ರಷ್ಟಿದ್ದ ಅಹಾರ ಹಣದುಬ್ಬರ ದರ, ಪ್ರಸಕ್ತ ವಾರದಲ್ಲಿ ಶೇ.0.19ರಷ್ಟು ಏರಿಕೆ ಕಂಡಿದೆ ಎಂದು ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಬಹಿರಂಗಗೊಂಡಿದೆ.

ಪ್ರಸಕ್ತ ವಾರದ ಅವಧಿಯಲ್ಲಿ ದ್ವಿದಳ ಧಾನ್ಯ ದರದಲ್ಲಿ ಶೇ.31ರಷ್ಟು,ಹಾಲು ಶೇ.21.1 ಹಾಗೂ ಹಣ್ಣುಗಳ ದರಗಳಲ್ಲಿ ಶೇ.18.7ರಷ್ಟು ಏರಿಕೆ ಕಂಡಿದೆ.

ಏತನ್ಮಧ್ಯೆ, ಆಲೂಗಡ್ಡೆ ಮತ್ತು ಈರುಳ್ಳಿ ದರಗಳಲ್ಲಿ ಕ್ರಮವಾಗಿ ಶೇ.30.87 ಹಾಗೂ ಶೇ.12.27ರಷ್ಟು ಇಳಿಕೆ ಕಂಡಿದೆ.

ಏಪ್ರಿಲ್‌ಗೆ ಮಾಸಾಂತ್ಯಗೊಂಡಂತೆ, ಒಟ್ಟಾರೆ ಹಣದುಬ್ಬರ ದರ ಶೇ.9.59ಕ್ಕೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ