ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಲ್‌ ಆಂಡ್ ಟಿ ಕಂಪೆನಿಗೆ 747 ಕೋಟಿ ರೂ.ಗುತ್ತಿಗೆ (Larsen & Toubro | Coal India | Hindalco Industries | Indiabulls Power | orders)
Bookmark and Share Feedback Print
 
ಇಂಜಿನಿಯರಿಂಗ್ ತಂತ್ರಜ್ಞಾನ ಸಂಸ್ಥೆಯಾದ ಲಾರ್ಸನ್ ಆಂಡ್ ಟೌರ್ಬೊ, ಕೋಲ್ ಇಂಡಿಯಾ,ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಇಂಡಿಯಾ ಬುಲ್ಸ್‌ ಪವರ್ ಕಂಪೆನಿಗಳಿಂದ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ 747 ಕೋಟಿ ರೂಪಾಯಿ ಗುತ್ತಿಗೆಯನ್ನು ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಗುತ್ತಿಗೆ ಪಡೆದ ಸುದ್ದಿ ಬಹಿರಂಗವಾಗುತ್ತಿದ್ದಂತೆ, ಶೇರುಪೇಟೆಯಲ್ಲಿ ಎಲ್‌ಆಂಡ್ ಟಿ ಶೇರುದರಗಳಲ್ಲಿ ಶೇ.1.11ರಷ್ಟು ಏರಿಕೆಯಾಗಿ 1,662 ರೂಪಾಯಿಗಳಿಗೆ ತಲುಪಿದೆ.

ಮಧ್ಯಪ್ರದೇಶದ ಕೋಲ್ ಇಂಡಿಯಾ ಕಂಪೆನಿ, ಎಲ್‌ ಆಂಡ್‌ಟಿ ಕಂಪೆನಿಗೆ 276 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿದೆ ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.

ಇಂಡಿಯಾ ಬುಲ್ಸ್‌ ಪವರ್ ಕಂಪೆನಿ, ಮಹಾರಾಷ್ಟ್ರದಲ್ಲಿರುವ ಘಟಕಕ್ಕೆ ಕಲ್ಲಿದ್ದಲು ಆಧಾರಿತ ಘಟಕ ನಿರ್ಮಾಣಕ್ಕಾಗಿ 260 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿದ್ದು,ಕಾಮಗಾರಿ ಮುಕ್ತಾಯಕ್ಕೆ 28 ತಿಂಗಳ ಗಡುವು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಕಂಪೆನಿಯಾದ ಹಿಂಡಾಲ್ಕೊ ಇಂಡಸ್ಟ್ರೀಸ್, ಓರಿಸ್ಸಾದಲ್ಲಿರುವ ಅಲ್ಯೂಮಿನಿಯಂ ರೋಲಿಂಗ್ ಮಿಲ್ ಕಾಂಪ್ಲೆಕ್ಸ್ ಕಟ್ಟಡ ಕಾಮಗಾರಿ ನಿರ್ಮಾಣಕ್ಕಾಗಿ 211 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ನೀಡಿದ್ದು, ಕಾಮಗಾರಿ ಮುಕ್ತಾಯಕ್ಕೆ 16 ತಿಂಗಳು ಗಡುವು ನೀಡಿದೆ ಎಂದು ಕಂಪೆನಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ