ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಧನ ದರ :ಸಂಪುಟ ಸಭೆಯಲ್ಲಿ ಚರ್ಚೆಗೆ ನಕಾರ (Union Cabinet | Ambika Soni | Pranab Mukherjee | Fuel prices)
Bookmark and Share Feedback Print
 
ವಿರೋಧ ಪಕ್ಷಗಳ ಭಾರಿ ವಿರೋಧದಿಂದಾಗಿ ನೆನಗುದಿಗೆ ಬಿದ್ದಿರುವ ಇಂಧನ ದರ ಏರಿಕೆ ಕುರಿತಂತೆ, ಸಂಪುಟ ಸಭೆಯಲ್ಲಿ ಚರ್ಚೆಯಾಗಲಿಲ್ಲ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.

ಇಂಧನ ದರ ಏರಿಕೆಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಿಲ್ಲ ಎಂದು ವಾರ್ತಾ ಮತ್ತು ಪ್ರಚಾರ ಖಾತೆ ಸಚಿವ ಅಂಬಿಕಾ ಸೋನಿ, ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೋಮವಾರದಂದು ನಡೆದ ಸಭೆಯಲ್ಲಿ ವಿತ್ತಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಅಧಿಕಾರಯುತ ಸಚಿವರ ಸಮಿತಿ, ಪ್ರಮುಖ ಸಚಿವರ ಗೈರುಹಾಜರಿಯಲ್ಲಿ, ಇಂಧನ ದರ ಏರಿಕೆ ನಿರ್ಧಾರವನ್ನು ಮುಂದೂಡಲಾಗಿತ್ತು.

ಸಭೆ ಮುಂದೂಡಿದ ಮರುದಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುಖರ್ಜಿ, ಸಹದ್ಯೋಗಿಗಳೊಂದಿಗೆ ಗುರುವಾರದಂದು ಚರ್ಚಿಸಿ, ಮುಂದಿನ ಸಭೆಯ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ