ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವ ಹುಂಡೈ ಕಂಪೆನಿಯ ನೌಕರರ ಮುಷ್ಕರ ಅಂತ್ಯಗೊಂಡಿದೆ. ಅಡಳಿತ ಮಂಡಳಿ ಕಳೆದ ವರ್ಷ ಹಿಂಸಾಚಾರದ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ವಜಾಗೊಳಿಸಿದ ನೌಕರರನ್ನು ಮರಳಿ ನೇಮಕ ಮಾಡಿಕೊಳ್ಳುವುದಾಗಿ ಅಶ್ವಾಸನೆ ನೀಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿದೆ.
ಕಳೆದ ವರ್ಷ ಹಿಂಸಾಚಾರದ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ, 35 ಮಂದಿ ನೌಕರರನ್ನು ವಜಾಗೊಳಿಸಲಾಗಿತ್ತು. ಆದರೆ, ಕಂಪೆನಿಯ ಅಡಳಿತ ಮಂಡಳಿ, ಸರಕಾರಿ ಅಧಿಕಾರಿಗಳು ಮತ್ತು ನೌಕರರ ಮಧ್ಯೆ ಏರ್ಪಟ್ಟ ಒಪ್ಪಂದದಿಂದಾಗಿ ಮಾನವತೆಯ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಕಂಪೆನಿ ಭರವಸೆ ನೀಡಿದೆ.
ಅಡಳಿತ ಮಂಡಳಿಯೊಂದಿಗಿನ ಸಮಸ್ಯೆ ಪರಿಹಾರವಾಗಿದೆ. ಮುಷ್ಕರ ನಿರತರಾಗಿದ್ದ 200 ನೌಕರರನ್ನು ಬಂಧಿಸಲಾಗಿದ್ದು,ಇಂದು ಬಿಡುಗಡೆಯಾಗಲಿದ್ದಾರೆ ಎಂದು ಹುಂಡೈ ಮೋಟಾರ್ ಇಂಡಿಯಾ ಎಂಪ್ಲಾಯಿಸ್ ಯುನಿಯನ್ ಉಪಾಧ್ಯಕ್ಷ ಕೆ.ತಂಗಪಾಂಡಿಯನ್ ಹೇಳಿದ್ದಾರೆ.
ತಮಿಳುನಾಡಿನ ಶ್ರೀಪೆರಬಂದೂರ್‌ನಲ್ಲಿ ಹುಂಡೈ ಘಟಕ ಆರಂಭವಾದ ನಂತರ, ಕಳೆದ 2008ರ ನಂತರ ನಾಲ್ಕನೇ ಭಾರಿಗೆ ಮುಷ್ಕರ ನಡೆದಿದೆ ಎಂದು ಕಂಪೆನಿಯ ಅಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.