ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಡಬ್ಲೂಎ ಹರಾಜಿನಿಂದ 38,300 ಕೋಟಿ ರೂ. ಆದಾಯ (BWA spectrum | Government | Auction | DoT | Pranab Mukherjee)
Bookmark and Share Feedback Print
 
ಬಿಡಬ್ಲೂಎ ತರಂಗಾಂತರಗಳ ಹರಾಜು 16ನೇ ದಿನಕ್ಕೆ ಅಂತ್ಯಗೊಂಡಿದ್ದು,ಕೇಂದ್ರ ಸರಕಾರಕ್ಕೆ 38,300 ಕೋಟಿ ರೂಪಾಯಿಗಳ ಆದಾಯವಾಗಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

ಬಿಡಬ್ಲೂಎ ತರಂಗಾಂತರಗಳ ಹರಾಜು ಬಿಡ್‌ನಲ್ಲಿ ಜಯಗಳಿಸಿದ ಕಂಪೆನಿಗಳ ವಿವರಗಳನ್ನು ಕೇಂದ್ರದ ಚೆಲಿಕಾಂ ಇಲಾಖೆ ಶೀಘ್ರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

3ಜಿ ತರಂಗಾಂತರ ಹಾಗೂ ಬಿಡಬ್ಲೂಎ ತರಂಗಾಂತರಗಳ ಹರಾಜಿನಿಂದ ಕೇಂದ್ರ ಸರಕಾರಕ್ಕೆ 1.06 ಲಕ್ಷ ಕೋಟಿ ರೂಪಾಯಿಗಳ ಆದಾಯವಾಗಿದ್ದು,ಈ ಮೊದಲು ಕೇವಲ 35,000 ಕೋಟಿ ರೂಪಾಯಿಗಳ ಆದಾಯವಾಗಲಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ಫೆಬ್ರವರಿ ತಿಂಗಳಲ್ಲಿ ನಡೆದ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘೋಷಿಸಿದ್ದರು.

ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜಿನಿಂದ ಕೇಂದ್ರ ಸರಕಾರಕ್ಕೆ ಒಟ್ಟು 67.719 ಕೋಟಿ ರೂಪಾಯಿಗಳ ಆದಾಯವಾಗಿದೆ.

3ಜಿ ತರಂಗಾಂತರಗಳ ಹರಾಜಿನಲ್ಲಿ ಮುಂಬೈ ಮತ್ತು ದೆಹಲಿ ಕ್ರಮವಾಗಿ 2,272 ಮತ್ತು 2,221 ಕೋಟಿ ರೂಪಾಯಿಗಳ ಬಿಡ್ ಪಡೆದು ದಾಖಲೆ ಸ್ಥಾಪಿಸಿವೆ.

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಟೆಲಿಕಾಂ ಸಂಸ್ಥೆಗಳು ಬಿಡ್‌ನಲ್ಲಿ ಪಾಲ್ಗೊಂಡಿಲ್ಲವಾದರೂ ಬಿಡ್‌ನಲ್ಲಿ ವಿಜೇತ ಕಂಪೆನಿಗಳು ನೀಡುವ ಮೊತ್ತವನ್ನು ಉಭಯ ಕಂಪೆನಿಗಳು ನೀಡಲಿವೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಭಾರ್ತಿ ಏರ್‌ಟೆಲ್, ರಿಲಯನ್ಸ್, ಐಡಿಯಾ ಸೆಲ್ಯೂಲರ್, ಏರ್‌ಸೆಲ್, ವೋಡಾಫೋನ್ ಮತ್ತು ಟಾಟಾ ಕಮ್ಯೂನಿಕೇಶನ್ಸ್ ಸೇರಿದಂತೆ ಒಟ್ಟು 11 ಟೆಲಿಕಾಂ ಕಂಪೆನಿಗಳು ಬಿಡ್‌ನಲ್ಲಿ ಪಾಲ್ಗೊಂಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ