ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ, ಚೀನಾ ಆರ್ಥಿಕ ಸದೃಢ ರಾಷ್ಟಗಳು:ಬಿಸಿಜಿ (Emerging markets | India | China | Global management)
Bookmark and Share Feedback Print
 
ಉದಯೋನ್ಮುಖ ಮಾರುಕಟ್ಟೆಗಳಾದ ಭಾರತ ಮತ್ತು ಚೀನಾ ಸಂಪತ್ತು ಸೃಷ್ಟಿಯಲ್ಲಿ ಅತೀವ ವೇಗದಿಂದ ಸಾಗಿವೆ ಎಂದು ಗ್ಲೋಬಲ್ ವೆಲ್ತ್ ಗೋ ಸಂಸ್ಥೆ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

ಬೊಸ್ಟೊನ್ ಕನ್ಸಲ್‌ಟಿಂಗ್ ಗ್ರೂಪ್, 10ನೇ ವಾರ್ಷಿಕ ಗ್ಲೋಬಲ್ ವೆಲ್ತ್ ರಿಪೋರ್ಟ್‌ನಲ್ಲಿ 2009-2014ರವರೆಗಿನ ಅವಧಿಯಲ್ಲಿ ಭಾರತ ಮತ್ತು ಚೀನಾ ಇತರ ದೇಶಗಳಿಗಿಂತ ಮೂರು ಪಟ್ಟು ಹೆಚ್ಚಿನ ಸಂಪತ್ತು ವೃದ್ಧಿಸಲಿದೆ ಎಂದು ಬಹಿರಂಗಪಡಿಸಿದೆ.

2009-14ರ ಅವಧಿಯಲ್ಲಿ ಜಾಗತಿಕ ಸಂಪತ್ತು, ವಾರ್ಷಿಕವಾಗಿ ಸರಾಸರಿ ಶೇ.6ರ ದರದಲ್ಲಿ ವೃದ್ಧಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ,ಆರ್ಥಿಕತೆ ಚೇತರಿಕೆ ನಿಧಾನಗತಿಯಲ್ಲಿ ಸಾಗಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

ಪ್ರಬಲ ಆರ್ಥಿಕತೆಯಿಂದಾಗಿ ಜಗತ್ತಿನ ಉದಯೋನ್ಮುಖ ಮಾರುಕಟ್ಟೆಗಳು ನಿರಂತರವಾಗಿ ಚೇತರಿಕೆ ಕಾಣುವಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಸಿಜಿ ವರದಿಯ ಸಹ-ಸಂಪಾದಕ ಜುನ್ ಟಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ