ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಕಳಪೆ ಗುಣಮಟ್ಟದ ಮಾಂಸಕ್ಕೆ ಸಿರಿಯಾ ನಿಷೇಧ (India|Syria|substandard meat|meat import)
Bookmark and Share Feedback Print
 
ಜಾಗತಿಕ ಗುಣಮಟ್ಟವನ್ನು ಹೊಂದಿರದ ಭಾರತದ ಮಾಂಸ ಅಮುದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಸಿರಿಯಾ ಹೇಳಿಕೆ ನೀಡಿದೆ.

ಭಾರತದಿಂದ ಅಮುದು ಮಾಡಿಕೊಳ್ಳುವ ಮಾಂಸ ಕಳಪೆ ಗುಣಮಟ್ಟವನ್ನು ಹೊಂದಿದ್ದರಿಂದ, ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.ಆದರೆ ಗುಣಮಟ್ಟವನ್ನು ಹೆಚ್ಚಿಸಿದ ನಂತರ ಅಮುದು ನಿಷೇಧವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಸಿರಾಯದ ಆರ್ಥಿಕ ಮತ್ತು ವಹಿವಾಟು ಖಾತೆ ಸಚಿವ ಲಾಮಿಯಾ ಮಾರಿ ಆಸಿ ತಿಳಿಸಿದ್ದಾರೆ.

ಏತನ್ಮಧ್ಯೆ, ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮಾ ನೇತೃತ್ವದ ಭಾರತದ ಕೈಗಾರಿಕೋದ್ಯಮದ ನಿಯೋಗ ಹಾಗೂ ಉಭಯ ದೇಶಗಳ ಅಧಿಕಾರಿಗಳು ಪರ್ಸಪರ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ ಎಂದು ಭರವಸೆ ನೀಡಿದರು.

ಸಿರಿಯಾ ದೇಶ ಸುಮಾರು ಒಂದು ತಿಂಗಳ ಹಿಂದೆ ಮಾಂಸ ಅಮುದಿಗೆ ನಿಷೇಧ ಹೇರಲಾಗಿದೆ.ಭಾರತ ಸಿರಿಯಾ ದೇಶಕ್ಕೆ ವಾರ್ಷಿಕವಾಗಿ 4.28 ಮಿಲಿಯನ್ ಡಾಲರ್ ಮೌಲ್ಯದ ಮಾಂಸವನ್ನು ರಫ್ತು ಮಾಡುತ್ತಿದೆ.

ಭಾರತದಿಂದ ಸಿರಿಯಾಗೆ ಔಷಧಿಗಳು, ವಾಹನಗಳು ಹಾಗೂ ಯಂತ್ರೋಪಕರಣಗಳ ರಫ್ತಿನಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ