ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಯಟ್ನಾಂ: ನೂತನ ನಿಯಮಗಳಿಂದ ಗೂಗಲ್ ಇಕ್ಕಟ್ಟಿನಲ್ಲಿ (Google | Internet rules | Vietnam | Websites)
Bookmark and Share Feedback Print
 
ಇಂಟರ್‌ನೆಟ್ ಬಳಕೆದಾರರ ಚಟುವಟಿಕೆಗಳ ಪರಿಶೀಲನೆ ಹಾಗೂ ಸರಕಾರ ಇತರ ವೆಬ್‌ಸೈಟ್‌ಗಳನ್ನು ತಡೆಹಿಡಿಯುವ ನಿಯಮಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ, ಜಾಗತಿಕ ಅಂತರ್ಜಾಲ ದೈತ್ಯ ಸಂಸ್ಥೆ ಗೂಗಲ್ ಅಕ್ಷೇಪಣೆ ವ್ಯಕ್ತಪಡಿಸಿದೆ.

ಸರಕಾರದ ನೂತನ ನಿಯಮಗಳಿಂದಾಗಿ ಹನೋಯಿಯಲ್ಲಿರುವ ಬಳಕೆದಾರರಿಗೆ, ಸ್ಥಳೀಯ ಬ್ರೌಸಿಂಗ್ ಕೆಫೆಗಳಲ್ಲಿ ಕೆಲ ವೆಬ್‌ಸೈಟ್‌ ವೀಕ್ಷಣೆಗೆ ಸಾಧ್ಯವಾಗುವುದಿಲ್ಲ ಎಂದು ಗೂಗಲ್ ಕಂಪೆನಿಯ ತಂತ್ರಜ್ಞಾನ ವಿಭಾಗದ ತಜ್ಞ ಡೊರೊಥಿ ಚೊವು ಹೇಳಿದ್ದಾರೆ.

ವಿಯಟ್ನಾಂ ಸರಕಾರ ಏಪ್ರಿಲ್ ತಿಂಗಳಲ್ಲಿ ಜಾರಿಗೆ ತಂದ ಸೈಬರ್ ನಿಯಮಗಳಿಂದ ಕಳವಳಗೊಂಡಿದ್ದು,ಸರಕಾರ ಬಳಕೆದಾರರ ಮೇಲ್‌ಗಳನ್ನು ಹ್ಯಾಕ್ ಮಾಡುವ ಅವಕಾಶ ನಿಯಮಗಳಲ್ಲಿದೆ ಎಂದು ಚೊವು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹ ನಿಯಮಗಳನ್ನು ಅಳವಡಿಸುವುದರಿಂದ, ಇ-ಮೇಲ್ ಬಳಕೆದಾರರ ವಿವರಗಳು, ಬಹಿರಂಗವಾಗುವ ಸಾಧ್ಯತೆಗಳಿವೆ. ಸರಕಾರ ನೂತನ ನಿಯಮಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತ ಎಂದು ಗೂಗಲ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ