ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಗಲ್ಫ್‌ಗೆ ಅಗ್ರಸ್ಥಾನ (Gulf countries | Global Welath | Millionaires)
Bookmark and Share Feedback Print
 
ವಿಶ್ವದ ಅತಿ ಹೆಚ್ಚು ಮಿಲಿಯನೇರ್‌ಗಳನ್ನು ಹೊಂದಿದ ಆರು ರಾಷ್ಟ್ರಗಳಲ್ಲಿ, ಮೂರು ರಾಷ್ಟ್ರಗಳು ಗಲ್ಫ್ ರಾಷ್ಟ್ರಗಳಲ್ಲಿವೆ ಎಂದು ನೂತನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಬೊಸ್ಟೊನ್ ಕನ್ಸಲ್‌ಟಿಂಗ್ ಗ್ರೂಪ್‌ನ ಗ್ಲೋಬಲ್ ವೆಲ್ತ್ ವರದಿಯ ಪ್ರಕಾರ, ಕುವೈತ್, ಕತಾರ್ ಮತ್ತು ಅರಬ್ ಸಂಯುಕ್ತ ರಾಷ್ಟ್ರಗಳು ಕ್ರಮವಾಗಿ ನಾಲ್ಕನೇ ,ಐದನೇ ಮತ್ತು ಆರನೇ ಸ್ಥಾನವನ್ನು ಪಡೆದಿವೆ.

ಸಿಂಗಾಪೂರ್, ವಿಶ್ವದ ಅತಿ ಹೆಚ್ಚು ಮಿಲಿಯನೇರ್‌ಗಳನ್ನು ಹೊಂದಿದ ರಾಷ್ಟ್ರಗಳಲ್ಲಿ ಅಗ್ರಸ್ಥಾನವನ್ನು ಹೊಂದಿದ್ದು, ನಂತರದ ಸ್ಥಾನವನ್ನು ಹಾಂಗ್‌ಕಾಂಗ್ ಮತ್ತು ಸ್ವಿಟ್ಜರ್‌ಲೆಂಡ್ ದೇಶಗಳು ಅಲಂಕರಿಸಿವೆ.

ಅಮೆರಿಕ, ಶೇ.4.1 ರಷ್ಟು ಮಿಲಿಯನೇರ್‌ಗಳನ್ನು ಹೊಂದುವ ಮೂಲಕ ಏಳನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಜಾಗತಿಕ ಆರ್ಥಿಕ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಪ್ರಸಕ್ತ ವರ್ಷದ ಅವಧಿಯಲ್ಲಿ ಶೇ.11.5ರಷ್ಟು ಏರಿಕೆಯಾಗಿ 111.5 ಟ್ರಿಲಿಯನ್‌ ಡಾಲರ್‌ಗಳಿಗೆ ಏರಿಕೆ ಕಂಡಿದೆ.

ಸದೃಢ ಆರ್ಥಿಕತೆಯ ಹಿನ್ನೆಲೆಯಲ್ಲಿ, ವಿಶ್ವದ ಉದಯೋನ್ಮುಖ ಮಾರುಕಟ್ಟೆಗಳ ಆರ್ಥಿಕತೆ ನಿರಂತರವಾಗಿ ಚೇತರಿಕೆ ಕಾಣಲಿದೆ. ಯಾವುದೇ ರೀತಿಯ ಸಂಶಯ ಬೇಡ ಎಂದು ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಜುನ್ ಟಂಗ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ