ಜಾಗತಿಕ ಮಾರುಕಟ್ಟೆಗಳ ಆರ್ಥಿಕ ಬಿಕ್ಕಟ್ಟಿನಿಂದಾಗಿ,ಹೂಡಿಕೆದಾರರು ಭಾರತದ ಮಾರುಕಟ್ಟೆಯತ್ತ ಆಸಕ್ತಿ ತಳೆದಿದ್ದರಿಂದ ಯುರೋಪ್ ರಾಷ್ಟ್ರಗಳಿಂದ ಹೆಚ್ಚಿನ ಬಂಡವಾಳ ಹರಿದುಬರಲಿದೆ ಎಂದು ಆರ್‌ಬಿಐ ಅಧಿಕಾರಿಗಳು ಹೇಳಿದ್ದಾರೆ.
ಮಾರುಕಟ್ಟೆ ಆಕರ್ಷಕವಾಗಿ ಪ್ರಶಸ್ತವಾದ ಸ್ಥಳದಲ್ಲಿ ಹೂಡಿಕೆ ಹರಿದುಬರುತ್ತದೆ.ಯುರೋಪ್ ಮಾರುಕಟ್ಟೆಗಳ ಅನಿಶ್ಚತತೆಯಿಂದಾಗಿ ಭಾರತಕ್ಕೆ ಹೆಚ್ಚಿನ ಬಂಡವಾಳ ಹರಿದುಬರಲಿದೆ ಎಂದು ಆರ್‌ಬಿಐ ಉಪಗೌವರ್ನರ್ ಉಷಾ ಥೋರಟ್ ತಿಳಿಸಿದ್ದಾರೆ.
ವಿದೇಶಿ ಹೂಡಿಕೆದಾರರು ಈಗಾಗಲೇ ದೇಶದ ಮಾರುಕಟ್ಟೆಗಳಲ್ಲಿ 5 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಿದ್ದಾರೆ.ಕಳೆದ ವರ್ಷದ ಅವಧಿಯಲ್ಲಿ 17.45 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿತ್ತು.
ಭಾರತ ಮತ್ತು ಚೀನಾ ದೇಶಗಳು ಉದಯೋನ್ಮುಖ ರಾಷ್ಟ್ರಗಳು ಆರ್ಥಿಕವಾಗಿ ಚೇತರಿಕೆಯ ದಾರಿಯಲ್ಲಿದ್ದು, ದೇಶದ ಕೃಷಿ ಕ್ಷೇತ್ರ ಚೇತರಿಕೆ ಕಾಣುತ್ತಿದೆ ಎಂದು ಆರ್‌ಬಿಐ ಗೌವರ್ನರ್ ಉಷಾ ಥೋರಟ್ ತಿಳಿಸಿದ್ದಾರೆ.