ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ದರ ಸತತ ಮೂರು ದಿನಗಳ ಕುಸಿತ ನಂತರ,ಖರೀದಿ ವಹಿವಾಟು ಹೆಚ್ಚಳವಾದ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಅಲ್ಪ ಚೇತರಿಕೆಯಾಗಿದೆ.
ಕೈಗಾರಿಕೆ ಕ್ಷೇತ್ರಗಳಿಂದ ಬೇಡಿಕೆ ಕುಸಿತವಾಗಿದ್ದರಿಂದ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸ್ಟ್ಯಾಂಡರ್ಡ್ ಚಿನ್ನ, ಪ್ರತಿ 10 ಗ್ರಾಂಗೆ 100 ರೂಪಾಯಿಗಳ ಏರಿಕೆಯಾಗಿ 18,740 ರೂಪಾಯಿಗಳಿಗೆ ತಲುಪಿದೆ. ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಚಿನ್ನದ ದರ 18,640 ರೂಪಾಯಿಗಳಿಗೆ ತಲುಪಿದೆ.
ಏತನ್ಮದ್ಯೆ, ಬೆಳ್ಳಿಯ ದರ ಪ್ರತಿ ಕೆಜಿಗೆ 30 ರೂಪಾಯಿಗಳಷ್ಟು ಇಳಿಕೆಯಾಗಿ, 29,760 ರೂಪಾಯಿಗಳಿಗೆ ತಲುಪಿದೆ. ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಬೆಳ್ಳಿ ದರ 29,790 ರೂಪಾಯಿಗಳಾಗಿತ್ತು.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 8 ಡಾಲರ್‌ಗಳಷ್ಟು ಏರಿಕೆಯಾಗಿ 1,230.20 ಡಾಲರ್‌ಗಳಿಗೆ ತಲುಪಿದೆ.