ಪ್ರಸಕ್ತ ವರ್ಷದ ಅವಧಿಯ ಆರಂಭಿಕ ಐದು ತಿಂಗಳ ಅವಧಿಯಲ್ಲಿ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ14.3ರಷ್ಟು ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶ್ವದ ಮೂರನೇ ಆರ್ಥಿಕ ಬಲಾಢ್ಯ ರಾಷ್ಟ್ರವಾದ ಚೀನಾದಲ್ಲಿ, ವಿದೇಶಿ ಕಂಪೆನಿಗಳು ಕಳೆದ ಐದು ತಿಂಗಳ ಅವಧಿಯಲ್ಲಿ 38.9 ಬಿಲಿಯನ್ ಡಾಲರ್‌ಗಳ ಹೂಡಿಕೆ ಮಾಡಿವೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರರಾದ ಯಾವೊ ಜಿಯಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿದೇಶಿ ಕಂಪೆನಿಗಳು ದೇಶದ ಉತ್ಪಾದನಾ ಕ್ಷೇತ್ರ, ರಿಯಲ್ ಎಸ್ಟೇಟ್ ಉದ್ಯಮ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿವೆ ಎಂದು ಹೇಳಿದ್ದಾರೆ.
ಹಣದುಬ್ಬರ ದರ ಏರಿಕೆಯನ್ನು ನಿಯಂತ್ರಿಸಲು ,ಗ್ರಾಹಕ ಸೂಚ್ಯಂಕ ದರವನ್ನು ಇಳಿಕೆಗೊಳಿಸುವ ಅಗತ್ಯವಿದೆ ಎಂದು ಸರಕಾರ ಹೇಲಿಕೆ ನೀಡಿದ ಒಂದು ದಿನದ ನಂತರ ವಾಣಿಜ್ಯ ಇಲಾಖೆ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.