ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗಲ್ಫ್‌ ಮೂಲದ ಎಲೆಕ್ಟ್ರಿಕ್ ಕಾರು ಶೀಘ್ರ ಮಾರುಕಟ್ಟೆಗೆ (Electric car | Arab world | Oman | Noor Majan)
Bookmark and Share Feedback Print
 
ಅರಬ್ ರಾಷ್ಟಗಳ ಪರಿಸರ - ಸ್ನೇಹಿ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲಿ ಒಮನ್ ಮಾರುಕಟ್ಟೆಗೆ ಲಗ್ಗೆಯಿಡುವ ನಿರೀಕ್ಷೆಯಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಎಲೆಕ್ಟ್ರಿಕ್ ಕಾರು ದರವನ್ನು 70,124.41 ಮತ್ತು 90,902 ಡಾಲರ್‌ಗಳಿಗೆ ನಿಗದಿಪಡಿಸಲಾಗಿದ್ದು, ಒಂದು ಬಾರಿ ಚಾರ್ಜ್‌ ಮಾಡಿದಲ್ಲಿ ನಿಲುಗಡೆರಹಿತವಾಗಿ ಸುಮಾರು 3600 ಕಿ.ಮಿ.ಗಳವರೆಗೆ ಪ್ರಯಾಣಿಸಬಹುದಾಗಿದೆ ಎಂದು ನೂರ್ ಮಜನ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಸುಲ್ತಾನ್ ಬಿನ್ ಹಮಧ್ ಅಲ್ ಅಮ್ರಿ ಹೇಳಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿರುವ ಎಲೆಕ್ಟ್ರಿಕ್ ಕಾರು, ಯಾವುದೇ ತೊಂದರೆಯಿಲ್ಲದೆ 21 ವರ್ಷಗಳವರೆಗೆ ಸುಸ್ಥಿತಿಯಲ್ಲಿರುತ್ತದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಪ್ರಕಾರ, ಕಾರಿನಲ್ಲಿ ಅಳವಡಿಸಲಾಗಿರುವ ಹವಾ ನಿಯಂತ್ರಕ ವ್ಯವಸ್ಥೆ ಸೋಲಾರ್ ಎನರ್ಜಿ ಆಧಾರಿತವಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.

ಒಮನ್‌ನಲ್ಲಿ ಆರಂಭಿಸಲಾಗಿರುವ ಕಾರು ತಯಾರಿಕೆ ಘಟಕದಿಂದ, ವಾರ್ಷಿಕವಾಗಿ 120 ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿನಲ್ಲಿ ಅಳವಡಿಸಲಾಗಿರುವ ಸೀಟುಗಳು ಮಸಾಜ್‌ ಆಧಾರಿತವಾಗಿದ್ದು,ಬಾಗಿಲುಗಳನ್ನು ಮೇಲ್ಮುಖವಾಗಿ ತೆರೆಯವ ವಿನ್ಯಾಸ ಹೊಂದಿವೆ.ಕಾರಿನಲ್ಲಿ 800 ಎಚ್‌,ಪಿ ಸಾಮರ್ಥ್ಯದ ಇಂಜಿನ್ ಅಳವಡಿಸಲಾಗಿದ್ದು, ಜಪಾನ್, ಅಮೆರಿಕ, ಜರ್ಮನಿ ಮತ್ತು ಹಾಂಗ್‌ಕಾಂಗ್‌ನಲ್ಲಿ ಘಟಕಗಳನ್ನು ಆರಂಭಿಸಲಾಗಿದೆ ಎಂದು ಸಿಇಒ ಅಲ್ ಅಮ್ರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ