ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ರಾಡ್‌ಬ್ಯಾಂಡ್: ಪರವಾನಿಗಿ ಶುಲ್ಕ ಪಾವತಿಸಲು ಜೂ.22ರ ಗಡುವು (Broadband | Auction | Winners | License Fee | Government | Telecom services)
Bookmark and Share Feedback Print
 
ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಯಶಸ್ವಿಯಾಗಿ ಮುಕ್ತಾಯಗೊಂಡು ಕೇಂದ್ರ ಸರಕಾರಕ್ಕೆ 38 ಸಾವಿರ ಕೋಟಿ ರೂಪಾಯಿಗಳ ಆದಾಯ ತಂದಿದೆ. ಬಿಡಬ್ಲೂಎ ಹರಾಜಿನಲ್ಲಿ ವಿಜೇತವಾದ ಕಂಪೆನಿಗಳು ಜೂನ್ 22ರೊಳಗೆ ಪರವಾನಿಗಿ ಶುಲ್ಕವನ್ನು ಪಾವತಿಸುವಂತೆ ಆದೇಶಿಸಿದೆ.

ಬಿಡಬ್ಲೂಎ ಹರಾಜಿನ ಫಲಿತಾಂಶಗಳನ್ನು ಸರಕಾರ ಅಂಗೀಕರಿಸಿದ್ದು, ಎಂಟಿಎನ್‌ಎಲ್ ಮತ್ತು ಬಿಎಸ್‌ಎನ್‌ಎಲ್ ಸೇರಿದಂತೆ ವಿಜೇತ ಕಂಪೆನಿಗಳು ಜೂನ್ 22ರೊಳಗೆ ಶುಲ್ಕ ಪಾವತಿಸುವಂತೆ ಟೆಲಿಕಾಂ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ

ಬಿಡಬ್ಲೂಎ ತರಂಗಾಂತರಗಳ ಹರಾಜು ಕಳೆದ ಶುಕ್ರವಾರದಂದು ಅಂತ್ಯಗೊಂಡಿದ್ದು, ಕೇಂದ್ರ ಸರಕಾರಕ್ಕೆ 38,543.31 ಕೋಟಿ ರೂಪಾಯಿಗಳ ಆದಾಯವಾಗಿದೆ.

ಬಿಡಬ್ಲೂಎ ತರಂಗಾಂತರಗಳ ಹರಾಜು, 16 ದಿನಗಳ ಅವಧಿಯಲ್ಲಿ 117 ಸುತ್ತಿನ ಹರಾಜು ನಡೆದು, ಅಂತಿಮವಾಗಿ 38,543.31 ಕೋಟಿ ರೂಪಾಯಿಗಳಿಗೆ ತಲುಪಿತ್ತು.

ಹರಾಜಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ವಿಮ್ಯಾಕ್ಸ್, ಐಡಿಯಾ ಸೆಲ್ಯೂಲರ್, ಏರ್‌ಸೆಲ್, ಆಗುರೆ ಮಾರಿಶಿಯಸ್ ಲಿಮಿಟೆಡ್, ಇನ್ಫೋಟೆಲ್ ಬ್ರಾಡ್‍ಬ್ಯಾಂಡ್ ಸೇವೆ, ಕ್ವವಲ್‌ಕಾಮ್ , ಸ್ಪೈಸ್ ಇಂಟರ್‌ನೆಟ್ ಪ್ರೋವೈಡರ್, ಟಾಟಾ ಕಮ್ಯೂನಿಕೇಶನ್ಸ್, ಟಿಕೊನಾ ಡಿಜಿಟಲ್ ನೆಟ್‌ವರ್ಕ್ಸ್ ಮತ್ತು ವೋಡಾಫೋನ್ ಎಸ್ಸಾರ್ ಕಂಪೆನಿಗಳು ಹರಾಜಿನಲ್ಲಿ ಪಾಲ್ಗೊಂಡಿದ್ದವು.

ಟೆಲಿಕಾಂ ಸೇವೆಗಳಿಗಾಗಿ ದೇಶವನ್ನು ಭೌಗೋಳಿಕವಾಗಿ ವಿಂಗಡಿಸಿದ್ದು, ಇನ್ಫೋಟೆಲ್ ಬ್ರಾಡ್‌ಬ್ಯಾಂಡ್ ಸರ್ವಿಸಸ್ ಸಂಸ್ಥೆ, ದೇಶದ ಎಲ್ಲಾ 22 ವಲಯಗಳ ಬಿಡ್‌ನಲ್ಲಿ ಜಯಗಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ