ಒಬ್ಬೊಬ್ಬರಿಗೆ ಒಂದೊಂದು ತೆರನಾದ ಆಸೆ ಇರುತ್ತೆ. ಅದರ ಪರಿಣಾಮ ಎಂಬಂತೆ ವ್ಯಕ್ತಿಯೊಬ್ಬರು ಕೊನೆಗೂ 12.3 (2.63ಮಿಲಿಯನ್ ಡಾಲರ್) ಕೋಟಿ ರೂಪಾಯಿ ಕೊಟ್ಟು ಶತಕೋಟಿ ಮೌಲ್ಯದ ಆಸ್ತಿಯ ಒಡೆಯ ವಾರೆನ್ ಬಫೆಟ್ ಜತೆ ಊಟ ಮಾಡುವ ಹರಾಜು ಮೌಲ್ಯಕ್ಕೆ ಒಪ್ಪಿಕೊಂಡಿದ್ದಾರೆ.
ಸತತ ಆರು ದಿನಗಳ ಕಾಲ ನಡೆದ ಆನ್‌ಲೈನ್ ಹರಾಜು ಪ್ರಕ್ರಿಯೆ ಜೂನ್ 11ರಂದು ರಾತ್ರಿ ಅಂತ್ಯಗೊಂಡಿತ್ತು. ವಾರೆನ್ ಬಫೆಟ್ ಜತೆ ಊಟ ಮಾಡುವ ಉದ್ದೇಶದಿಂದ ಹಲವರು ಬಿಡ್‌ನಲ್ಲಿ ಭಾಗವಹಿಸಿದ್ದರು. 2008ರ 11ನೇ ವಾರ್ಷಿಕ ಹರಾಜು ಪ್ರಕ್ರಿಯೆಯಲ್ಲಿ 2.1 ಮಿಲಿಯನ್ ಡಾಲರ್ ಪಾವತಿಸಿ ಬಿಡ್ ಗೆದ್ದಿದ್ದರು. ಅದೇ ರೀತಿ 2009ರಲ್ಲಿ ಟೋರಾಂಟೋದ ಸಾಲಿಡಾ ಎಂಬವರು 1.69ಮಿಲಿಯನ್ ಡಾಲರ್ ಕೊಟ್ಟು ಬಫೆಟ್ ಜೊತೆ ಊಟ ಮಾಡಿದ್ದರು.
ಅಂತೂ ಕೊನೆಗೂ ಅನಾಮಿಕ ವ್ಯಕ್ತಿಯೊಬ್ಬರು 12.3 ಕೋಟಿ ರೂಪಾಯಿ ನೀಡಿ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಬಿಡ್ ದರ ಶೇ.24ರಷ್ಟು ಹೆಚ್ಚಳವಾಗಿದೆ. ಪ್ರತಿವರ್ಷವೂ ಆನ್‌ಲೈನ್ ಮೂಲಕ ಬಿಡ್ ನಡೆಸಲಾಗುತ್ತದೆ. ಇದರಿಂದ ಬಂದ ಹಣವನ್ನು ದತ್ತಿ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಲಾಗುತ್ತಿದೆ.