ಭಾರತದ ಸಗಟು ಸೂಚ್ಯಂಕ ಹಣದುಬ್ಬರ ದರ ಮೇ ತಿಂಗಳ ಅವಧಿಯಲ್ಲಿ ಶೇ.10.16ಕ್ಕೆ ಏರಿಕೆ ಕಂಡಿದೆ. ಕಳೆದ ಏಪ್ರಿಲ್ ತಿಂಗಳ ಅವದಿಯಲ್ಲಿ ಹಣದುಬ್ಬರ ದರ ಶೇ.9.59ರಷ್ಟಾಗಿತ್ತು ಎಂದು ಸರಕಾರಿ ಮೂಲಗಳು ತಿಳಿಸಿವೆ.
ವಾರ್ಷಿಕ ಆಧಾರದ ಸಗಟು ದರ ಸೂಚ್ಯಂಕ ಅಥವಾ ಡಬ್ಲೂಪಿಐ,ಮೇ ತಿಂಗಳ ಅವಧಿಯಲ್ಲಿ ಶೇ.9.60ಕ್ಕಿಂತ ಹೆಚ್ಚಿನ ಏರಿಕೆ ಕಾಣಲಿದೆ ಎಂದು ಆರ್ಥಿಕ ತಜ್ಞರು ಡೊ ಜೊನ್ಸ್ ನ್ಯೂಸ್‌ವೈರ್ಸ್ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಳೆದ ಮಾರ್ಚ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.90 ರಿಂದ ಶೇ.11.04ಕ್ಕೆ ಏರಿಕೆ ಕಂಡಿತ್ತು.ದೇಶದ ಸಗಟು ಸೂಚ್ಯಂಕ ಏಪ್ರಿಲ್ ತಿಂಗಳ ಅವಧಿಯಲ್ಲಿ 253.7 ರಷ್ಟಿದ್ದು,ಮೇ ತಿಂಗಳ ಅವಧಿಯಲ್ಲಿ ಶೇ.1.7ರಷ್ಟು ಹೆಚ್ಚಳವಾಗಿ 258.1ಕ್ಕೆ ತಲುಪಿದೆ.
ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ 2010ರ ನಂತರ ಹಣದುಬ್ಬರ ದರ ಶೇ.5.5ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಿತ್ತು.