ಟೆಲಿಕಾಂ ಕ್ಷೇತ್ರದಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ:ರಿಲಯನ್ಸ್
ಮುಂಬೈ, ಸೋಮವಾರ, 14 ಜೂನ್ 2010( 13:05 IST )
ಇನ್ಫೋಟೆಲ್ ಟೆಲಿಕಾಂ ಕಂಪೆನಿಯನ್ನು ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್,ಮುಂಬರುವ ಎರಡು ವರ್ಷಗಳಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಿದೆ ಕಂಪೆನಿಯ ವಕ್ತಾರರು ಹೇಳಿದ್ದಾರೆ.
ಕಳೆದ ಶುಕ್ರವಾರದಂದು ರಾಷ್ಟ್ರದಾದ್ಯಂತ ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ತರಂಗಾಂತರಗಳನ್ನು ಪಡೆದ ಇನ್ಫೋಟೆಲ್ ಕಂಪೆನಿಯನ್ನು ಖರೀದಿಸಿ, ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಟ್ಟ ರಿಲಯನ್ಸ್ ಇಂಡಸ್ಟ್ರೀಸ್, ಟೆಲಿಕಾಂ ಕಂಪೆನಿಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉದ್ದೇಶಿತ ಹೂಡಿಕೆ ಹಾಗೂ ಬ್ರಾಡ್‌ಬ್ಯಾಂಡ್ ತರಂಗಾಂತರ ಶುಲ್ಕವಾದ 2.75 ಬಿಲಿಯನ್ ಡಾಲರ್‌ಗಳನ್ನು ಪವಾತಿಸಬೇಕಾಗಿದೆ ಎಂದು ವಕ್ತಾರರು ವಿವರಣೆ ನೀಡಿದ್ದಾರೆ.