ಪೆಟ್ರೋಲ್ ಉತ್ಪನ್ನಗಳ ದರ ಏರಿಕೆ ಕುರಿತಂತೆ ಚರ್ಚಿಸಲು ಅಧಿಕಾರಯುತ ಸಚಿವ ಸಂಪುಟ ಸಮಿತಿ ಸಭೆಯ ದಿನಾಂಕ ಇನ್ನೂ ನಿಗದಿಪಡಿಸಬೇಕಾಗಿದೆ ಎಂದು ತೈಲ ಸಚಿವಾಲಯದ ಕಾರ್ಯದರ್ಶಿ ಎಸ್.ಸುಂದರೇಶನ್ ಹೇಳಿದ್ದಾರೆ.
ಹಣದುಬ್ಬಪ ಹೆಚ್ಚಳದಿಂದಾಗಿ ಇಂಧನ ದರಗಳ ಏರಿಕೆಯಲ್ಲಿ ವಿಳಂಬವಾಗುತ್ತಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಂದರೇಶನ್, ದರಗಳನ್ನು ಹೆಚ್ಚಿಸದಿದ್ದಲ್ಲಿ ತೈಲ ಕಂಪೆನಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದ ಹಣದುಬ್ಬರ ದರ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮೇ ತಿಂಗಳಾಂತ್ಯಕ್ಕೆ ಶೇ.10.16ರಷ್ಟು ಏರಿಕೆ ಕಂಡಿದೆ.
ಜೂನ್ 7 ರಂದು ಅಧಿಕಾರಯುತ ಸಚಿವ ಸಂಪುಟ ಸಮಿತಿ,ಸಭೆ ಸೇರಿ ಚರ್ಚಿಸಿತಾದರೂ ಅಂತಿಮವಾಗಿ ದರ ಏರಿಕೆಯ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಮತ್ತಷ್ಟು ಚರ್ಚೆಯ ಅಗತ್ಯವಿದೆ ಎಂದು ತೈಲ ಸಚಿವಾಲಯದ ಕಾರ್ಯದರ್ಶಿ ಸುಂದರೇಶನ್ ತಿಳಿಸಿದ್ದಾರೆ.