ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗಲ್ಫ್ ರಾಷ್ಟ್ರಗಳಲ್ಲಿ 3ಡಿ ಟಿವಿ ಸೇವೆ ಆರಂಭ (3D TV service | UAE | North Africa | Middle East)
Bookmark and Share Feedback Print
 
3ಡಿ ಟಿವಿ ಸೇವೆಗಳನ್ನು ನೀಡುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಯುಎಇ ಐದನೇ ಸ್ಥಾನವನ್ನು ಪಡೆದಿದ್ದು,ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದಲ್ಲಿ ಮೊದಲನೇಯದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಅರಬ್ ಸಂಯುಕ್ತ ರಾಷ್ಟ್ರದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎತಿಸಲಾತ್ ಕಂಪೆನಿ,ದೇಶದ ಗ್ರಾಹಕರಿಗೆ 3ಡಿ ಟಿವಿ ಸೇವೆಯನ್ನು ಘೋಷಿಸಿದ್ದು, ದೇಶದಲ್ಲಿ ಪ್ರಥಮ ಬಾರಿಗೆ ಸೇವೆಯನ್ನು ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿದೆ.

ಮಾಧ್ಯಮ ಮಾರುಕಟ್ಟೆಗಳ ಹಾಗೂ ಜಾಗತಿಕ ಟೆಲಿಕಾಂ ಕಂಪೆನಿಗಳ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತ ಒದಗಿಸುವ ಇನ್‌ಫಾರ್ಮಾ ಟೆಲಿಕಾಮ್ಸ್ ಮತ್ತು ಮೀಡಿಯಾ ಸಂಸ್ಥೆ, 3ಡಿ ಟಿವಿ ಸೇವೆಯಲ್ಲಿ ಯುಎಇ ಐದನೇ ಸ್ಥಾನ ಪಡೆದಿರುವುದನ್ನು ಖಚಿತಪಡಿಸಿದೆ.

3ಡಿ ಟಿವಿ ಸೇವೆಯನ್ನು ಈಗಾಗಲೇ ಫ್ರಾನ್ಸ್, ಬೆಲ್ಜಿಯಂ ಮತ್ತು ಪೋರ್ಚ್‌ಗಲ್‌ ರಾಷ್ಟ್ರಗಳಲ್ಲಿ ಮೇ 2010 ರಲ್ಲಿ ಆರಂಭಿಸಲಾಗಿದೆ. ಪ್ರಸಕ್ತ ತಿಂಗಳ ಆರಂಭದಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ಪ್ರಾರಂಭಿಸಲಾಗಿದೆ.

3ಡಿ ಟಿವಿ ಸೇವಾ ಕ್ಷೇತ್ರದ ವಿಶ್ವದ ಐದು ರಾಷ್ಟ್ರಗಳಲ್ಲಿ ಯುಎಇ ಸ್ಥಾನಪಡೆದಿರುವುದಕ್ಕೆ ಹೆಮ್ಮೆಯನಿಸುತ್ತಿದೆ.ಪ್ರಾದೇಶಿಕ ವಲಯದಲ್ಲಿ ಪ್ರಥಮ ಬಾರಿಗೆ 3ಡಿ ಟಿವಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಎತಿಸಲಾತ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಹ್ಮದ್ ಅಬ್ದುಲ್ ಕರೀಂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ