ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಕಠಿಣ ಕ್ರಮ:ಮೊಂಟೆಕ್ (RBI | Montek Singh Ahluwalia | Planning Commission | PMEAC | Inflation)
ಹಣದುಬ್ಬರ ದರ ಮೇ ತಿಂಗಳಾಂತ್ಯಕ್ಕೆ ಎರಡಂಕಿಗೆ ಏರಿಕೆ ಕಂಡ ಹಿನ್ನೆಲೆಯಲ್ಲಿ, ದರ ಏರಿಕೆಯನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ನಿರಂತರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.
ಕೈಗಾರಿಕೆ ಅಭಿವೃದ್ಧಿ ಹಾಗೂ ಹಣದುಬ್ಬರ ಏರಿಕೆ ನಿಯಂತ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶನ ನೀಡಬೇಕು ಎನ್ನುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷ ಸಿ.ರಂಗರಾಜನ್ ಅವರ ಸಲಹೆಗೆ ಸಮ್ಮತಿಯಿದೆ ಎಂದು ಮೊಂಟೆಕ್ ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮೊದಲ ತ್ರೈಮಾಸಿಕ ಆರ್ಥಿಕ ನೀತಿ ಪರಿಷ್ಕರಣ ವಿವರಗಳನ್ನು ಜೂನ್ 27 ರಂದು ಘೋಷಿಸಲು ದಿನಾಂಕ ನಿಗದಿಪಡಿಸಿದೆ. ಆರ್ಥಿಕ ನೀತಿಗಳ ಪರಿಷ್ಕರಣ ಸಭೆಯಲ್ಲಿ, ದರ ಏರಿಕೆ ನಿಯಂತ್ರಣ ಕುರಿತಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥರಾದ ರಂಗರಾಜನ್ ಮಾತನಾಡಿ, ಆರ್‌ಬಿಐ ಮೇ ತಿಂಗಳ ಹಣದುಬ್ಬರ ದರವನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ನೀತಿಗಳನ್ನು ಜಾರಿಗೆ ತರಬೇಕಾಗಿದೆಯೇ ಹೊರತು ಏಪ್ರಿಲ್ ತಿಂಗಳ ಕೈಗಾರಿಕೆ ವೃದ್ಧಿ ದರವನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಆರ್‌ಬಿಐಗೆ ಸಲಹೆ ನೀಡಿದ್ದಾರೆ.