ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜೂ.17 ರಂದು ಇಂಧನ ದರ ಏರಿಕೆ ಸಭೆ:ದೇವ್ರಾ (Group of ministers | Fuel prices | Petroleum | Murli Deora)
Bookmark and Share Feedback Print
 
ಸರಕಾರದಿಂದ ಇಂಧನ ದರ ಏರಿಕೆ ನಿಯಂತ್ರಣವನ್ನು ಮುಕ್ತಗೊಳಿಸುವುದು ಹಾಗೂ ಇಂಧನ ದರಗಳ ಏರಿಕೆ ಕುರಿತಂತೆ ಚರ್ಚಿಸಲು ಜೂನ್ 17 ರಂದು ಸಭೆಯನ್ನು ಕರೆಯುವಂತೆ ಅಧಿಕಾರಯುತ ಸಚಿವ ಸಂಪುಟ ಸಮಿಗೆ ಶಿಫಾರಸು ಮಾಡಲಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.

ಅಧಿಕಾರಯುತ ಸಚಿವ ಸಂಪುಟ ಸಮಿತಿಯ ಸಭೆ ಜೂನ್ 17 ರಂದು ಆಯೋಜಿಸಿದಲ್ಲಿ, ಪೂರವಾಗಿರುತ್ತದೆ ಎಂದು ಸಚಿವ ದೇವ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಜೂನ್ 7 ರಂದು ಸಭೆ ಸೇರಿದ್ದ ಸಚಿವರ ಸಮಿತಿ, ಸಭೆಯಲ್ಲಿ ಪ್ರಮುಖ ಸಚಿವರ ಗೈರುಹಾಜರಿ ಹಾಗೂ ವಿರೋಧ ಪಕ್ಷಗಳ ಹೆಚ್ಚಿದ ಒತ್ತಡದಿಂದಾಗಿ ದರ ಏರಿಕೆಯನ್ನು ಕೈಗೊಳ್ಳದೆ,ಸಭೆಯನ್ನು ಅಂತ್ಯಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ