ದೇಶದ ಟೆಲಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪೆನಿ ಟಾಟಾ ಟೆಲಿ ಸರ್ವಿಸಸ್, ಮೇ ತಿಂಗಳ ಅವಧಿಯಲ್ಲಿ 2.33 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸುವುದರೊಂದಿಗೆ 70 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
2005ರಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಟಾಟಾ ಟೆಲಿಸರ್ವಿಸಸ್, ಐದು ವರ್ಷಗಳ ಅವಧಿಯಲ್ಲಿ 70 ಮಿಲಿಯನ್ ಗ್ರಾಹಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಕಳೆದ 2009ರ ಅವಧಿಯಲ್ಲಿ 35 ಮಿಲಿಯನ್ ಗ್ರಾಹಕರನ್ನು ಹೊಂದಿದ್ದ ಟಾಟಾ ಟೆಲಿಸರ್ವಿಸಸ್,12 ತಿಂಗಳುಗಳ ಅವಧಿಯಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ದ್ವಿಗುಣವಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪೆನಿಯ ಪಾರದರ್ಶಕತೆ, ಸೇವೆ ಹಾಗೂ ಇತರ ಗುಣಮಟ್ಟದ ಕಾರಣಗಳಿಂದಾಗಿ, ನಂಬಿಕೆ ವಿಶ್ವಾಸ ತೋರಿದ ಗ್ರಾಹಕರಿಗೆ ನಾವು ಅಭಿನಂದಿಸುತ್ತೇವೆ ಎಂದು ಟಾಟಾ ಟೆಲಿ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರ್ಡಾನಾ ಹೇಳಿದ್ದಾರೆ.
ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಪ್ರಕಾರ, ಕಳೆದ ಏಪ್ರಿಲ್ ತಿಂಗಳ ಅವಧಿಯಲ್ಲಿ ಟೆಲಿಕಾಂ ಕಂಪೆನಿಗಳು ಒಟ್ಟು 16.9 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿವೆ.ದೇಶದಲ್ಲಿ 638.05 ಮಿಲಿಯನ್ ಗ್ರಾಹಕರಿದ್ದಾರೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.