ಹಣದುಬ್ಬರ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಶೀಘ್ರದಲ್ಲಿ ಇಂಧನ ದರಗಳ ಏರಿಕೆಯನ್ನು ಸರಕಾರ ತಳ್ಳಿಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಇಂಧನ ದರಗಳ ಏರಿಕೆ ನಿರ್ಧಾರ ಕೈಗೊಳ್ಳುವ ಅಧಿಕಾರಯುತ ಸಚಿವರ ಸಮಿತಿ ಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ, ಗುರುವಾರದಂದು ಅಧಿಕಾರಯುತ ಸಚಿವರ ಸಮಿತಿಯ ಸಭೆಯನ್ನು ಆಯೋಜಿಸಿ, ಶೀಘ್ರದಲ್ಲಿ ಇಂಧನ ದರ ಏರಿಕೆ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ ನಂತರ ವರದಿಗಳು ಬಹಿರಂಗವಾಗಿವೆ.
ಅಧಿಕಾರಯುತ ಸಚಿವರ ಸಮಿತಿ, ಕಳೆದ ಜೂನ್ 7 ರಂದು ಸಭೆ ಸೇರಿ ಇಂಧನ ದರ ಏರಿಕೆ ಕುರಿತಂತೆ ಚರ್ಚಿಸಿತ್ತು. ಆದರೆ ಪ್ರಮುಖ ಸಚಿವರುಗಳ ಗೈರುಹಾಜರಿಯಿಂದಾಗಿ ನಿರ್ಧಾರಕ್ಕೆ ಬರಲಾಗಲಿಲ್ಲ.ಮತ್ತಷ್ಟು ಮಾಕುಕತೆಗಳು ಅಗತ್ಯವೆಂದು ಸಭೆಯನ್ನು ಮುಂದೂಡಲಾಗಿತ್ತು.