ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೂಡಿಕೆ : ಅಮೆರಿಕದಲ್ಲಿ ಭಾರತಕ್ಕೆ ಮೂರನೇ ಸ್ಥಾನ (India | United States | Foreign investors | US economy | Recession)
Bookmark and Share Feedback Print
 
ಅಮೆರಿಕದ ವಿದೇಶಿ ಹೂಡಿಕೆದಾರ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನವನ್ನು ಪಡೆದಿದ್ದು,ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಭಾರತದ ಹೂಡಿಕೆ ಸಕಾರಾತ್ಮಕವಾಗಿತ್ತು ಎಂದು ಅಧ್ಯಕ್ಷ ಬರಾಕ್ ಒಬಾಮಾ ಅಡಳಿತದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದಲ್ಲಿ ಅತಿ ವೇಗದಲ್ಲಿ ಸಾಗುತ್ತಿರುವ ಭಾರತ ಮೂರನೇ ಬೃಹತ್ ಹೂಡಿಕೆಯ ರಾಷ್ಟ್ರವಾಗಿದೆ ಎಂದು ದಕ್ಷಿಣ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಾಗೂ ಆಫ್ರಿಕಾದ ಉಪ ಸಹಾಯಕ ವಾಣಿಜ್ಯ ಕಾರ್ಯದರ್ಶಿ ಹೊಲಿ ವಿನೆಯಾರ್ಡ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಭಾರತದ ಹೂಡಿಕೆ 2008ರಲ್ಲಿ 4.5 ಬಿಲಿಯನ್ ಡಾಲರ್‌ಗಳಾಗಿತ್ತು.2009ರ ಅವಧಿಯಲ್ಲಿ ಹೂಡಿಕೆಯಲ್ಲಿ ಶೇ.60ರಷ್ಟು ಹೆಚ್ಚಳವಾಗಿತ್ತು ಎಂದು ವಿನೆಯಾರ್ಡ್ ವಿವರಣೆ ನೀಡಿದ್ದಾರೆ.

2004ರಿಂದ 2009ರ ಅವಧಿಯಲ್ಲಿ ಭಾರತ ಕಂಪೆನಿಗಳು 372 ಅಮೆರಿಕದ ಕಂಪೆನಿಗಳನ್ನು ಖರೀದಿಸಿದ್ದು, ಒಟ್ಟು 21 ಬಿಲಿಯನ್ ಡಾಲರ್‌ ಸಂಪತ್ತನ್ನು ಹೊಂದಿದ್ದವು.ಇದರಿಂದಾಗಿ ಅಮೆರಿಕದ 40 ಸಾವಿರ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಎಫ್‌ಐಸಿಸಿಐ ಪ್ರಧಾನ ಕಾರ್ಯದರ್ಶಿ ಅಮಿತ್ ಮಿತ್ರಾ ಮಾತನಾಡಿ, ಭಾರತೀಯ ಕಂಪೆನಿಗಳು ಅಮೆರಿಕದ 127 ಗ್ರೀನ್‌ಫಿಲ್ಡ್ ಕ್ಷೇತ್ರಗಳಲ್ಲಿ 5.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿ, ಅಮೆರಿಕದ ಆರ್ಥಿಕತೆ ಹೆಚ್ಚಿಸುವಲ್ಲಿ ಭಾರತ ನೆರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ