ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್ ಇಂಡಿಯಾ, ಚೆನ್ನೈ ಘಟಕದಿಂದ ಪೆಟ್ರೋಲ್ ಇಂಜಿನ್‌ಗಳನ್ನು ಥೈಲೆಂಡ್‌ಗೆ ರಫ್ತು ವಹಿವಾಟು ಆರಂಭಿಸಿರುವುದಾಗಿ ಹೇಳಿಕೆ ನೀಡಿದೆ.
ಏಷ್ಯಾ ಫೆಸಿಫಿಕ್ ಮತ್ತು ಆಫ್ರಿಕಾ ಖಂಡ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಿಗೆ ರಫ್ತು ವಹಿವಾಟು ವಿಸ್ತರಿಸಲು ಯೋಜನೆಗಳನ್ನು ರೂಪಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿ ಮೊದಲ ಹಂತದಲ್ಲಿ 1.4 ಲೀಟರ್ ಇಂಜಿನ್ ಮತ್ತು 1.6 ಲೀಟರ್ ಪೆಟ್ರೋಲ್ ಇಂಜಿನ್‌ಗಳನ್ನು ಚೆನ್ನೈನಲ್ಲಿರುವ ಮರೈಮಲೈ ನಗರ ಘಟಕದಿಂದ, ಸಹೋದರ ಸಂಸ್ಥೆಯಾದ ಥೈಲೆಂಡ್‌ನ ಅಟೋ ಅಲೈಯನ್ಸ್ ಸಂಸ್ಥೆಗೆ ರಫ್ತು ಮಾಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಆರಂಭದ ಹಂತದಲ್ಲಿ 1,000 ಪೆಟ್ರೋಲ್ ಇಂಜಿನ್‌ಗಳನ್ನು ರಫ್ತು ಮಾಡಲಾಗಿದೆ. ಫೋರ್ಡ್ ಇಂಡಿಯಾ ಸಂಸ್ಥೆಯನ್ನು ಡೀಸೆಲ್ ಮತ್ತು ಪೆಟ್ರೋಲ್ ಇಂಜಿನ್ ತಯಾರಿಕೆಯ ಪ್ರಮುಖ ಕೇಂದ್ರವಾಗಿ ರೂಪಗೊಳ್ಳಲಿದೆ ಎಂದು ಫೋರ್ಡ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಿಚೈಲ್ ಬೊನೆಹಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ತಿಂಗಳು 2500 ಪೆಟ್ರೋಲ್ ಇಂಜಿನ್‌ಗಳ ರಫ್ತು ವಹಿವಾಟನ್ನು ಉದ್ದೇಶಿಸಲಾಗಿದೆ. ಮುಂಬರುವ ದಿನಗಳಲ್ಲಿ ರಫ್ಪು ವಹಿವಾಟಿನಲ್ಲಿ ಹೆಚ್ಚಳವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.