ಭಾರತ ,ಚೀನಾ ರಾಷ್ಟ್ರಗಳು ಬಲಾಢ್ಯ ಆರ್ಥಿಕ ರಾಷ್ಟ್ರಗಳಾಗಿ ಹೊರಹೊಮ್ಮಿದ್ದು, ಏಷ್ಯಾ ಜಾಗತಿಕ ಮಟ್ಟದಲ್ಲಿ ಆರ್ಥಿಕ ಶಕ್ತಿಯಾಗಲಿದೆ ಎಂದು ಐಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಸೇರಿದಂತೆ ಏಷ್ಯಾದ ಆರ್ಥಿಕತೆಯಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ. ಯುರೋಪ್, ಅಮೆರಿಕ ಹಾಗೂ ಇತರ ಖಂಢಗಳ ಆರ್ಥಿಕತೆಗಿಂತ ಅಧಿಕವಾಗಿದೆ ಎಂದು ಐಎಂಎಫ್ ನಿರ್ದೇಶಕ ಏಷ್ಯಾ ಮತ್ತು ಫೆಸಿಫಿಕ್ ವಿಭಾಗದ ಅನೂಪ್ ಸಿಂಗ್ ಹೇಳಿದ್ದಾರೆ.
ಮುಂಬರುವ 2030 ವೇಳೆಗೆ, ಏಷ್ಯಾದ ಆರ್ಥಿಕ ವೃದ್ಧಿ ದರ ಜಿ-7 ರಾಷ್ಟ್ರಗಳಿಗಿಂತ ಹೆಚ್ಚಳವಾಗಲಿದೆ ಎಂದು ಅನೂಪ್‌ಸಿಂಗ್ ಬರೆದ ವರದಿಯಲ್ಲಿ ತಿಳಿಸಿದ್ದಾರೆ.