ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪಿಎಎಫ್‌, ಪಿಂಚಣಿ ಹಣ ಹಿಂಪಡೆದಲ್ಲಿ ತೆರಿಗೆಯಿಲ್ಲ:ಸರಕಾರ (DTC | Tax | Pension)
Bookmark and Share Feedback Print
 
ನೌಕರರ ಬಿಷ್ಯ ನಿಧಿ ಹಾಗೂ ಪಿಂಚಣಿಯನ್ನು ಖಾತೆಯನ್ನು ಹಿಂಪಡೆದಲ್ಲಿ ತೆರಿಗೆ ವಿಧಿಸುವ ನಿರ್ಧಾರವನ್ನು ತಳ್ಳಿಹಾಕಿದ್ದು, ಗೃಹಸಾಲದ ಮೇಲಿನ ತೆರಿಗೆ ವಿನಾಯಿತಿಯನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

50 ವರ್ಷ ಹಳೆಯ ತೆರಿಗೆ ಪದ್ದತಿಯ ಬದಲಿಗೆ ಪರಿಷ್ಕ್ರತ ತೆರಿಗೆ ವಿಧೇಯಕ ಜಾರಿಗೊಳಿಸಲು ನಿರ್ಧರಿಸಿದ್ದು, ನೌಕರರ ಭವಿಷ್ಯ ನಿಧಿ ಹಾಗೂ ಪಿಂಚಣಿ ಹಿಂಪಡೆತದ ಮೇಲಿನ ತೆರಿಗೆಯನ್ನು ಕೈಬಿಟ್ಟಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.

ವಾರ್ಷಿಕ ಆದಾಯ 1.60-10 ಲಕ್ಷ ರೂಪಾಯಿಗಳವರೆಗೆ ಶೇ.10ರಷ್ಟು ತೆರಿಗೆ ಹಾಗೂ 10-25 ಲಕ್ಷ ರೂಪಾಯಿಗಳವರೆಗಿನ ವಾರ್ಷಿಕ ಆದಾಯಕ್ಕೆ ಶೇ.20ರಷ್ಟು ತೆರಿಗೆ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ತೆರಿಗೆಯನ್ನು ವಿಧಿಸುವಂತೆ ಸಲಹೆ ನೀಡಲಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸುನೀಲ್ ಮಿತ್ರಾ ತಿಳಿಸಿದ್ದಾರೆ.

ತೆರಿಗೆ ವಿಧೇಯಕವನ್ನು ಸಂಸತ್ತಿನಲ್ಲಿ ನಡೆಯುವ ಮುಂಗಾರು ಅಧಿವೇಶನದಲ್ಲಿ ಮಂಡಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮಿತ್ರಾ ವಿವರಣೆ ನೀಡಿದ್ದಾರೆ.

ಕೈಗಾರಿಕೋದ್ಯಮಗಳಿಂದ ಸಂಪೂರ್ಣ ವಿರೋಧ ವ್ಯಕ್ತವಾದ ಕನಿಷ್ಠ ಬದಲಿ ತೆರಿಗೆ(ಮ್ಯಾಟ್)ಯನ್ನು ಕೂಡಾ ರದ್ದುಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ