ಮುಂಬರುವ ಎರಡು ವಾರಗಳಲ್ಲಿ ಅಹಾರ ಹಣದುಬ್ಬರ ಏರಿಕೆ ಕಾಣಲಿರುವುದರಿಂದ ಅಗತ್ಯ ವಸ್ತುಗಳ ದರಗಳು ಕೂಡಾ ಗಗನಕ್ಕೇರಲಿವೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.
ಮೂಲಸೌಕರ್ಯ ಸಮ್ಮೇಳನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೊಂಟೆಕ್, ಭಾರತೀಯ ರಿಸರ್ವ್ ಬ್ಯಾಂಕ್ ಮಾರುಕಟ್ಟೆಗಳ ನಗದು ಹಣದ ಹರಿವಿನ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಅಹಾರ ಹಣದುಬ್ಬರ ದರ ಮೇ ತಿಂಗಳಾಂತ್ಯಕ್ಕೆ ವಾರ್ಷಿಕ ಶೇ.16.74ಕ್ಕೆ ಏರಿಕೆ ಕಂಡಿದ್ದು, ಹಣದುಬ್ಬರ ಏರಿಕೆಯ ಮೇಲೆ ಒತ್ತಡ ಹೇರುತ್ತಿದೆ.ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಹಣದ ಹರಿವನ್ನು ನಿಯಂತ್ರಿಸಿದಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮೊಂಟೆಕ್ ಅಭಿಪ್ರಾಯಪಟ್ಟಿದ್ದಾರೆ.
ಮುಂಗಡ ತೆರಿಗೆ ಪಾವತಿ ಹಾಗೂ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆ ಪರವಾನಿಗಿ ಶುಲ್ಕ ಪಾವತಿಯಿಂದಾಗಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಹಣದ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.