ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಪ್ರತಿ ಲೀಟರ್‌ಗೆ 2-4 ರೂಪಾಯಿ ಹಾಗೂ ಅಡುಗೆ ಅನಿಲ ದರದಲ್ಲಿ 25 ರೂಪಾಯಿ ಹೆಚ್ಚಳವನ್ನು ಘೋಷಿಸಲು, ಅಧಿಕಾರಯುತ ಸಚಿವರ ಸಮಿತಿ ಮುಂದಿನ ವಾರದಲ್ಲಿ ಸಭೆ ಸೇರುವ ಸಾಧ್ಯತೆಗಳಿವೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ಅಧಿಕಾರಯುತ ಸಚಿವರ ಸಮಿತಿ ಸಭೆಯನ್ನು ಜೂನ್ 17 ರಂದು ನಡೆಸುವಂತೆ ಮನವಿ ಮಾಡಲಾಗಿತ್ತು.ಆದರೆ ಅಗತ್ಯ ಕಾರ್ಯಕ್ರಮಗಳ ಒತ್ತಡದಿಂದಾಗಿ ಸಭೆ ಸೇರಲು ಸಾಧ್ಯವಾಗುತ್ತಿಲ್ಲ ಎಂದು ಸಚಿವ ದೇವ್ರಾ ಅಸಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಸಮಿತಿ ಮುಂದಿನ ವಾರದಲ್ಲಿ ಜೂನ್ 24 ಅಥವಾ 25ರಂದು ಸಭೆ ಸೇರುವ ಸಾಧ್ಯತೆಗಳಿದ್ದು,ಸಭೆಯಲ್ಲಿ ಚರ್ಚಿಸುವ ಸಂಗತಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮೂಲಗಳ ಪ್ರಕಾರ, ಅಧಿಕಾರಯುತ ಸಚಿವರ ಸಮಿತಿ, ಪೆಟ್ರೋಲ್ ದರ ಏರಿಕೆಯನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದು ಬಹುತೇಕ ಸ್ವಾಯತ್ಯತೆ ನೀಡುವುದು ಹಾಗೂ ಇಂಧನ ದರಗಳ ಏರಿಕೆಯ ಘೋಷಣೆ ಕುರಿತಂತೆ ಚರ್ಚೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿವೆ.