ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಮೊಬೈಲ್ ಯೋಜನೆ ಘೋಷಿಸಿದ ರಿಲಯನ್ಸ್ (Reliance Communications | Anil Ambani | MobileNet Plan | Subscribers | Mobile internet)
Bookmark and Share Feedback Print
 
PTI
ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಕಮ್ಯೂನಿಕೇಶನ್ಸ್, ಮೊಬೈಲ್ ನೆಟ್ ಪ್ಲ್ಯಾನ್ ಯೋಜನೆ ಘೋಷಿಸಿದ್ದು, ಪೋಸ್ಟ್‌ಪೇಡ್ ಹಾಗೂ ಪ್ರೀಪೇಡ್ ಗ್ರಾಹಕರು ಮಾಸಿಕವಾಗಿ 99 ರೂಪಾಯಿಗಳನ್ನು ಪಾವತಿಸಿ, ಅನಿಯಮಿತ ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ರಿಲಯನ್ಸ್ ಕಮ್ಯೂನಿಕೇಶನ್ಸ್, ದೇಶದಲ್ಲಿ ಮೊದಲ ಬಾರಿಗೆ 3ಜಿ ಸೇವಾ ಸೌಲಭ್ಯವನ್ನು ಒದಗಿಸುತ್ತಿದ್ದು,ಸೇವೆಯನ್ನು ಪಡೆಯುವುದರಿಂದ ಗ್ರಾಹಕರು ಸೋಶಿಯಲ್ ನೆಟ್‌ವರ್ಕಿಂಗ್ ತಾಣಗಳು,ಸಂದೇಶದ ಅಪ್ಲೀಕೇಶನ್ಸ್‌ಗಳು ಚಾಟ್ ಸೇವೆ ಮತ್ತು ಇ-ಮೇಲ್ ಖಾತೆಗಳಾದ ಯಾಹೂ, ಜಿ-ಮೇಲ್ ಮತ್ತು ಹಾಟ್‌ಮೇಲ್ ಹಾಗೂ ಮಲ್ಟಿಮೀಡಿಯಾ ಕಂಟೆಂಟ್‌‌‌ಗಳನ್ನು ಡೌನಲೋಡ್ ಮಾಡಬಹುದಾಗಿದೆ.

ವಿಶೇಷವಾದ ಮೊಬೈಲ್ ಇಂಟರ್‌ನೆಟ್ ಪ್ಲ್ಯಾನ್ ಪ್ರಕಾರ , ಗ್ರಾಹಕರು ಅನಿಯಮಿತವಾಗಿ ದೇಶದಾದ್ಯಂತ ಮೊಬೈಲ್ ಇಂಟರ್‌ನೆಟ್ ಸೌಲಭ್ಯದೊಂದಿಗೆ ಗ್ರಾಹಕರಿಗೆ ಇಷ್ಟವಾದ ಯಾವುದೇ ಸೈಟ್‌‌ಗಳನ್ನು ನೋಡಬಹುದಾಗಿದೆ ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್ ಮಾರುಕಟ್ಟೆ ವೈರ್‌ಲೆಸ್ ಬಿಜಿನೆಸ್ ಮುಖ್ಯಸ್ಥ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

ಆರ್‌ಕಾಂ ಸಂಸ್ಥೆ, ಗ್ರಾಹಕರ ಅನುಕೂಲಕ್ಕಾಗಿ ಕಡಿಮೆ ದರವನ್ನು ನಿಗದಿಪಡಿಸಿದ್ದು, ಡೇ ಪಾಸ್‌ಗೆ 5 ರೂಪಾಯಿ, ವೀಕ್ಲಿ ಪಾಸ್‌ಗೆ 29 ರೂಪಾಯಿ, 15 ದಿನಗಳ ಪಾಸ್‌ಗೆ 51 ರೂಪಾಯಿಗಳನ್ನು ಪಾವತಿಸಿ ಮೊಬೈಲ್ ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್‌ಎಂ ವಹಿವಾಟಿನಿಂದಾಗಿ ಆದಾಯ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.ಮೊಬೈಲ್‌‌ನೆಟ್‌ ಪ್ಲ್ಯಾನ್ ಯೋಜನೆಯನ್ನು ದೇಶದ 24,000 ನಗರಗಳಲ್ಲಿ ಹಾಗೂ 600,000 ಗ್ರಾಮಗಳಲ್ಲಿ ವಿಸ್ತರಿಸುವ ಗುರಿಯನ್ನು ರಿಲಯನ್ಸ್ ಕಮ್ಯೂನಿಕೇಶನ್ಸ್ ಹೊಂದಿದೆ ಎಂದು ವೈರ್‌ಲೆಸ್ ಬಿಜಿನೆಸ್ ಮುಖ್ಯಸ್ಥ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ