ಲೈಫ್ ಇನ್‌ಶ್ಯೂರೆನ್ಸ್ ವಹಿವಾಟಿನಲ್ಲಿ ಶೇ.18ರಷ್ಟು ಹೆಚ್ಚಳ
ಮುಂಬೈ, ಬುಧವಾರ, 16 ಜೂನ್ 2010( 19:36 IST )
ಜೀವ ವಿಮೆ ಉದ್ಯಮ ಪ್ರಸಕ್ತ ವರ್ಷದ ಅವಧಿಯಲ್ಲಿ ಶೇ.18ರಷ್ಟು ಚೇತರಿಕೆ ಕಂಡು ಒಟ್ಟು ಕಂತು ಪಾವತಿ ಮೊತ್ತ 2,61,025 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಲೈಫ್ ಇನ್‌ಶ್ಯೂರೆನ್ಸ್ ಕೌನ್ಸಿಲ್ ಹೇಳಿಕೆ ನೀಡಿದೆ.
2008-09ರ ಅವಧಿಯಲ್ಲಿ ವಿಮೆ ಉದ್ಯಮ 2,21.791 ಕೋಟಿ ರೂಪಾಯಿಗಳ ಒಟ್ಟು ಕಂತು ಮೊತ್ತವನ್ನು ಸಂಗ್ರಹಿಸಿತ್ತು ಎಂದು ಕೌನ್ಸಿಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2009-10ರ ಅವಧಿಯಲ್ಲಿ ವಹಿವಾಟಿನಲ್ಲಿ ಶೇ.25ರಷ್ಟು ಹೆಚ್ಚಳವಾಗಿ, 1,09,213 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 87,006 ಕೋಟಿ ರೂಪಾಯಿಗಳಾಗಿತ್ತು ಎಂದು ತಿಳಿಸಿದೆ.
ನವೀಕರಣ ಪ್ರೀಮಿಯಂ ಪಾವತಿಯಲ್ಲಿ ಶೇ.13ರಷ್ಟು ಹೆಚ್ಚಳವಾಗಿದ್ದು,1,51,812 ಕೋಟಿ ರೂಪಾಯಿಗಳಿಗೆ ತಲುಪಿದೆ.
ಅಡಳಿತಾತ್ಮಕ ಅನಗತ್ಯ ವೆಚ್ಚವನ್ನು ಕಡಿತಗೊಳಿಸಲಾಗಿದ್ದು, ಒಟ್ಟು ವೆಚ್ಚದ ವಾರ್ಷಿಕ ಮೊತ್ತ 28,929 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಲೈಫ್ ಇನ್‌ಶ್ಯೂರೆನ್ಸ್ ಕೌನ್ಸಿಲ್ ಹೊರಡಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಒಂದು ವೇಳೆ ಭಾರತ ಆರ್ಥಿಕವಾಗಿ ಬಲಾಢ್ಯ ರಾಷ್ಟ್ರವಾಗಲು, ಅಭಿವೃದ್ಧಿ ಅಗತ್ಯ, ವಿಮೆ ಕಂಪೆನಿಗಳು ಕೂಡಾ ಗ್ರಾಮೀಣ ಭಾಗದಲ್ಲಿ 2.8 ಕೋಟಿ ಪಿಲಿಸಿಗಳನ್ನು ಮಾರಾಟ ಮಾಡಿವೆ.
ಜೀವ ವಿಮೆ ಉದ್ಯಮ, 2.68 ಲಕ್ಷ ಜನತೆಗೆ ಉದ್ಯೋಗವನ್ನು ನೀಡಿದ್ದು, 30 ಲಕ್ಷ ಏಜೆಂಟ್‌ರನ್ನು ಹೊಂದಿದೆ. ಬಾರತ ವಿಶ್ವದಲ್ಲಿ ಅತಿ ಹೆಚ್ಚು ವಿಮೆಗಳನ್ನು ಹೊಂದಿದ ರಾಷ್ಟ್ರವಾಗಿದೆ ಎಂದು ಲೈಫ್ ಇನ್‌ಶ್ಯೂರೆನ್ಸ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಮಾಥುರ್ ತಿಳಿಸಿದ್ದಾರೆ.