ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೋಹಾ ಯಶಸ್ವಿಗೆ ಭಾರತ ,ಚೀನಾ ಅಡ್ಡಿ:ಅಮೆರಿಕ (Doha Round | India | China | US | Roadblock)
Bookmark and Share Feedback Print
 
ಅಂತಾರಾಷ್ಟ್ರೀಯ ವಹಿವಾಟು ಸಂಧಾನ ಪ್ರಕ್ರಿಯೆಯಲ್ಲಿ ಕೆಲ ಪ್ರಮುಖ ರಾಷ್ಟ್ರಗಳು ಅಡ್ಡಿಯಾಗಿದ್ದು, ದೋಹಾ ಒಪ್ಪಂದದ ಯಶಸ್ವಿಗೆ ಹಾಗೂ ವೈಫಲ್ಯ ಭಾರತ, ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಮೇಲೆ ಅವಲಂಬಿಸಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ದೋಹಾ ಮಾತುಕತೆಯಲ್ಲಿ ಪಾಲ್ಗೊಂಡಿರುವ ಕೆಲ ರಾಷ್ಟ್ರಗಳು ಸ್ವಾರ್ಥಸಾಧನೆಗಾಗಿ, ಹಲವು ಅಡೆತಡೆಗಳನ್ನು ಸೃಷ್ಟಿಸುತ್ತಿವೆ ಎಂದು ಅಮೆರಿಕದ ವಾಣಿಜ್ಯ ಇಲಾಖೆಯ ಉಪಕಾರ್ಯದರ್ಶಿ ಡೆಮೆಟ್ರೊಯಿಸ್ ಮರಾಂಟಿಸ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ದೋಹಾ ಒಪ್ಪಂದದ ಯಶಸ್ಸು ಹಾಗೂ ವೈಫಲ್ಯಕ್ಕೆ ಭಾರತ, ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಮೇಲೆ ಅವಲಂಬಿಸಿದೆ. ಆಯಾ ದೇಶಗಳು ಜವಾಬ್ದಾರಿಯನ್ನು ಅರಿತು ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿ ಸಾಗಬಹುದಾಗಿದೆ.

2011ರಲ್ಲಿ ಏಷ್ಯಾ ಫೆಸಿಫಿಕ್ ಎಕಾನಾಮಿಕ್ ಕೋ-ಅಪರೇಶನ್ ಆತಿಥ್ಯ ವಹಿಸಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅಡಳಿತ ಯೋಜನೆಗಳನ್ನು ರೂಪಿಸಿದೆ ಎಂದು ಅಮೆರಿಕದ ವಾಣಿಜ್ಯ ಇಲಾಖೆಯ ಉಪಕಾರ್ಯದರ್ಶಿ ಡೆಮೆಟ್ರೊಯಿಸ್ ಮರಾಂಟಿಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ