ದೇಶದ ಆರ್ಥಿಕ ವ್ಯವಸ್ಥೆ ಆರೋಗ್ಯಕರವಾಗಿದ್ದು,ಬ್ಯಾಂಕ್‌ಗಳು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಬ್ಯಾಂಕ್‌ಗಳಿಗೆ ಕಡಿವಾಣ ಹಾಕುವ ನಿಯಮಗಳನ್ನು ಪುನರ್‌ರಚಿಸಬೇಕು ಎನ್ನುವ ನಿರ್ಧಾರದ ಬಗ್ಗೆ ಅಕ್ಷೇಪಣೆಯಿಲ್ಲ.ಬ್ಯಾಂಕ್‌ಗಳನ್ನು ಸೂಕ್ತ ನಿಯಮಾವಳಿಗಳ ಮೂಲಕ ನಿಗ್ರಹಿಸುವುದು ಅಗತ್ಯವಾಗಿದೆ ಎಂದು ರಂಗರಾಜನ್ ಸ್ಕೊಚ್ ಫೌಂಡೇಶನ್ ಆಯೋಜಿಸಿದ ಸಮಾರಂಭದಲ್ಲಿ ತಿಳಿಸಿದ್ದಾರೆ.
ದೇಶಧ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವಾಗಿರಲು ಬ್ಯಾಂಕಿಂಗ್ ನೀತಿಗಳಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಪೋರೇಟ್ ಮೂಲದ ಮಾರುಕಟ್ಟೆಗಳು ಚೇತರಿಕೆಯಾದಲ್ಲಿ, ಸಣ್ಣ ಕಂಪೆನಿಗಳಿಗೆ ಆರ್ಥಿಕ ನೆರವು ದೊರೆಯಲಿದೆ ಎಂದು ಸಿ.ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.