ತರಕಾರಿ ಮತ್ತು ಹಣ್ಣುಹಂಪಲುಗಳ ದರಗಳಲ್ಲಿ ಅಲ್ಪ ಇಳಿಕೆ ಕಂಡಿದ್ದರಿಂದ, ಜೂನ್ 5ಕ್ಕೆ ವಾರಂತ್ಯಗೊಂಡಂತೆ ವಾರ್ಷಿಕ ಹಣದುಬ್ಬರ ದರ ಶೇ.16.12ಕ್ಕೆ ತಲುಪಿ ಇಳಿಕೆ ಕಂಡಿದೆ.
ಹಿಂದಿನ ವಾರದ ಅವಧಿಯಲ್ಲಿ ಅಗತ್ಯ ವಸ್ತುಗಳ ದರಗಳಲ್ಲಿ ಏರಿಕೆಯಾಗಿದ್ದರಿಂದ, ಅಹಾರ ಹಣದುಬ್ಬರ ದರ ಶೇ.16.74ಕ್ಕೆ ತಲುಪಿತ್ತು.
ವಾರ-ವಾರದ ಅವಧಿಯಲ್ಲಿ ತರಕಾರಿ ಮತ್ತು ಹಣ್ಣುಗಳ ದರಗಳಲ್ಲಿ ಶೇ.6ರಷ್ಟು ಇಳಿಕೆಯಾಗಿದೆ.ಟೀ ದರಗಳಲ್ಲಿ ಶೇ.2ರಷ್ಟು ಕುಸಿತವಾಗಿದೆ.ಉದ್ದು ದರದಲ್ಲಿ ಶೇ.6ರಷ್ಟು ಏರಿಕೆಯಾಗಿದ್ದು, ಮೈದಾ, ಬಾಜ್ರಾ ದರಗಳಲ್ಲಿ ಶೇ.ರಷ್ಟು ಏರಿಕೆ ಕಂಡಿದೆ.
ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದಲ್ಲಿ ಆಲೂಗಡ್ಡೆ ದರದಲ್ಲಿ ಶೇ.35ರಷ್ಟು ಕುಸಿತವಾಗಿದ್ದು,ಈರುಳ್ಳಿ ದರದಲ್ಲಿ ಶೇ.17.80, ದ್ವಿದಳ ಧಾನ್ಯ ಶೇ.34ರಷ್ಟು ಮತ್ತು ಹಾಲು ಶೇ.21ರಷ್ಟು ದರದಲ್ಲಿ ಏರಿಕೆಯಾಗಿದೆ.
ಅಹಾರ ಹಣದುಬ್ಬರ ದರ ಏರಿಕೆಯಿಂದ ಒಟ್ಟಾರೆ ಙಮದುಬ್ಬರ ದರದಲ್ಲಿ ಏರಿಕೆಯಾಗಿ, ಮೇ ತಿಂಗಳ ಅವಧಿಯಲ್ಲಿ (ಶೇ.10.16)ಎರಡಂಕಿಗೆ ಏರಿಕೆಯಾಗಿದೆ.