ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ದೇಶದಲ್ಲಿರುವ ಯಾವುದೇ ಟೆಲಿಕಾಂ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜನೆಗಳನ್ನು ರೂಪಿಸಿಲ್ಲ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಕಂಪೆನಿಗಳನ್ನು ಖರೀದಿಸದಿರುವುದಕ್ಕೆ ಯಾವುದೇ ಪ್ರಮುಖ ಕಾರಣಗಳಿಲ್ಲ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರ್ತಿ ಏರ್‌ಟೆಲ್ ಸಂಸ್ಥೆ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಏಪ್ರಿಲ್ ಮಾಸಾಂತ್ಯಕ್ಕೆ, 601 ಮಿಲಿಯನ್ ಗ್ರಾಹಕರನ್ನು ಹೊಂದುವ ಮೂಲಕ ಶೇ.22ರಷ್ಟು ಪಾಲನ್ನು ಹೊಂದಿದೆ
ದೇಶದ ಟೆಲಿಕಾಂ ಮಾರುಕಟ್ಟೆ ವಿಲೀನವಾಗುವ ಸಾಧ್ಯತೆಗಳಿವೆ.ಪ್ರಸ್ತುತವಿರುವ 14 ಟೆಲಿಕಾಂ ಕಂಪೆನಿಗಳಲ್ಲಿ ಕೇವಲ ಐದು ಅಥವಾ ಆರು ರಂಪೆನಿಗಳು ಮಾತ್ರ ಉಳಿಯುವ ಸಾಧ್ಯತೆಗಳಿವೆ. ಅದರಲ್ಲಿ ಕೇವಲ ಮೂರು ಕಂಪೆನಿಗಳು ಲಾಭದಾಯಕವಾಗಿರಲಿವೆ ಎಂದು ಹೇಳಿದ್ದಾರೆ.
ಭಾರತದ ಟೆಲಿಕಾಂ ಕಂಪೆನಿಯಾದ ಭಾರ್ತಿ ಏರ್‌ಟೆಲ್, ಇತ್ತೀಚೆಗೆ ಕುವೈತ್ ಮೂಲದ ಝೈನ್ ಟೆಲಿಕಾಂ ಕಂಪೆನಿಯನ್ನು 9 ಬಿಲಿಯನ್ ಡಾಲರ್‌ಗಳನ್ನು ಪಾವತಿಸಿ ಖರೀದಿಸಿದೆ.