ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶ್ರೀಮಂತ ಅಮೆರಿಕನ್ನರು ಸಂಪತ್ತು ದಾನ ಮಾಡಲಿ:ಗೇಟ್ಸ್ (Warren Buffett | Bill Gates | American | Charities | Philanthropic foundations)
Bookmark and Share Feedback Print
 
ವಿಶ್ವದ ಶ್ರೀಮಂತರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ವಾರೆನ್ ಭಪೆಟ್ ಮತ್ತು ಬಿಲ್ ಗೇಟ್ಸ್, ಅಮೆರಿಕದ ಶ್ರೀಮಂತ ಉದ್ಯಮಿಗಳು ಕನಿಷ್ಠ ತಮ್ಮ ಅರ್ಧ ಸಂಪತ್ತನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಮೆರಿಕದ ಶ್ರೀಮಂತರು ತಮ್ಮ ಅಪಾರ ಸಂಪತ್ತಿನಲ್ಲಿ ಕನಿಷ್ಠ ಅರ್ಧದಷ್ಟು ಸಂಪತ್ತನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾವನಾಗಿ ನೀಡಬೇಕು ಎಂದು ಪ್ರಖ್ಯಾತ ಹೂಡಿಕೆದಾರ ಬಫೆಟ್ ಮತ್ತು ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂದಾ ಗೇಟ್ಸ್ ಕರೆ ನೀಡಿದ್ದಾರೆ.

ಹೂಡಿಕೆ ಕ್ಷೇತ್ರದಲ್ಲಿ ಚಿರಪರಿಚಿತ 79 ವರ್ಷ ವಯಸ್ಸಿನ ಶ್ರೀಮಂತ ಉದ್ಯಮಿ ವಾರೆನ್ ಬಫೆಟ್, ತಮ್ಮ ಸಂಪತ್ತಿನಲ್ಲಿ ಶೇ.99ರಷ್ಟು ಪಾಲು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡಿದ್ದು, ತಮ್ಮ ಮರಣದ ನಂತರವೂ ಧರ್ಮಾರ್ಥ ಸಂಸ್ಥೆಗಳಿಗೆ ದಾನ ನೀಡುವ ಕಾರ್ಯ ಮುಂದುವರಿಯಲಿದೆ.

2006ರಲ್ಲಿ ಬಫೆಟ್, ಬರ್ಕ್‌ಶೈರ್ ಹಾಥ್‌ವೇ ಕಂಪೆನಿಯ ಸಂಪೂರ್ಣ ಶೇರುಗಳನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ನೀಡಿ, ತಮ್ಮ ಉದಾರತೆಯನ್ನು ತೋರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ