ಅನಿಲ್ ಅಂಬಾನಿ ಸಂಚಾಲಿತ ವಿದ್ಯುತ್ ಘಟಕಗಳು ಸಂಪೂರ್ಣವಾಗಿ ಸಿದ್ಧಗೊಂಡ ನಂತರ ಅನಿಲವನ್ನು ಸರಬರಾಜು ಮಾಡಲಾಗುವುದು ಎಂದು ಸಹೋದರ ಮುಕೇಶ್ ಅಂಬಾನಿ ಹೇಳಿದ್ದಾರೆ.
ಕಂಪೆನಿಯ ಶೇರುದಾರರ ಸಭೆಯಲ್ಲಿ ಮಾತನಾಡಿದ ಅಂಬಾನಿ, ದರ ಹಾಗೂ ಅನಿಲ ಹಂಚಿಕೆ ಸರಕಾರ ನಿರ್ಧರಿಸಿರುವುದರಿಂದ ಕೆಜಿ ಬೇಸಿನ್‌ನಿಂದ ಅನಿಲ ಸರಬರಾಜು ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿದ್ದರೂ ಎಡಿಎಜಿಯೊಂದಿಗೆ ಸಂಬಂಧವನ್ನು ಉತ್ತಮಪಡಿಸಿಕೊಳ್ಳಬೇಕಾಗಿದೆ ಎಂದು ಸಭೆಯ ನಂತರ ಅಂಬಾನಿ ಸುದ್ದಿಗಾರರಿಗೆ ವಿವರಣೆ ನೀಡಿದ್ದಾರೆ.
ದೆಹಲಿ ಬಳಿಯಿರುವ ದಾದ್ರಿ ಘಟಕ ಸೇರಿದಂತೆ ಅನಿಲ್ ಅಂಬಾನಿ ನೇತೃತ್ವದ ವಿದ್ಯುತ್ ಘಟಕಗಳಿಗೆ, ಅನಿಲ ಹಂಚಿಕೆ ಕುರಿತಂತೆ ಸರಕಾರ ಅನುಮತಿ ನೀಡಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.